ಕುಂದಾಪುರ: ಮನೆಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಆರೋಪಿಯನ್ನು ಕುಂದಾಪುರ ಆಹಾರ ನಿರೀಕ್ಷಕರು ಹಾಗೂ ಪೊಲೀಸರ ನೇತೃತ್ವದ ತಂಡ ಬಂಧಿಸಿದೆ.
ತಲ್ಲೂರು ಗ್ರಾಮದ ಪಾರ್ತಿಕಟ್ಟೆ ರಸ್ತೆಯ ಅಬ್ದುಲ್ ಮುನಾಫ್ ,ತನ್ನ ಮನೆಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ದಾಸ್ತಾನು ಇರಿಸಿದ್ದರು.ಈ ಕುರಿತ ಖಚಿತ ಮಾಹಿತಿಯಂತೆ ಕುಂದಾಪುರದ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ಹಾಗೂ ಕುಂದಾಪುರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ 80 ಸಾವಿರ ರೂ. ಮೌಲ್ಯದ ರಿಕ್ಷಾ, ರಿಕ್ಷಾದಲ್ಲಿ ಮತ್ತು ಮನೆಯ ರೂಮಿನಲ್ಲಿದ್ದ 45100 ರೂ. ಮೌಲ್ಯದ 41 ಅಕ್ಕಿ ಚೀಲದಲ್ಲಿ ರುವ 2050 ಕಿಲೋ ತೂಕದ ಅಕ್ಕಿ, 3000 ರೂ. ಮೌಲ್ಯದ ಇಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/08/2022 11:32 am