ಕಾಪು: ಉಡುಪಿ ಜಿಲ್ಲೆಯಲ್ಲಿ ಕೆಲವೇ ದಿನಗಳ ಅಂತರದಲ್ಲಿ ಮೂರು ಹತ್ಯೆ ನಡೆದಿರುವ ಬೆನ್ನಿಗೇ ಮತ್ತೊಂದು ಕೊಲೆಗೆ ಸ್ಕೆಚ್ ಹಾಕಲಾಗಿತ್ತೆ? ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ. ಇದಕ್ಕೆ ಕಾರಣ ನಿನ್ನೆ ಕಾಪು ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದು ಪ್ರಸಂಗ. ಸ್ಥಳೀಯ ಬಜರಂಗ ದಳ ಸಂಚಾಲಕ ಸುಧೀರ್ ಸೋನು ಅವರ ಮನೆಗೆ ಆಗಮಿಸಿದ ಅಪರಿಚಿತ ಯುವಕರಿಬ್ಬರು ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರವಿವಾರ ಬೆಳಗ್ಗೆ 11 ಗಂಟೆಗೆ ಸುಧೀರ್ ಸೋನು ಅವರ ಮನೆಗೆ ಆಗಮಿಸಿದ ಮುಸ್ಲಿಂ ಯುವಕರಿಬ್ಬರು ನಿಮ್ಮ ಬಳಿ ಮಾತನಾಡಲಿಕ್ಕಿದೆ. ನಿಮ್ಮನ್ನು ಆಸಿಫ್ ಅವರು ಕಾರಿನಲ್ಲಿ ಕಾಯುತ್ತಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಅನುಮಾನಗೊಂಡ ಸುಧೀರ್ ಮನೆಯಿಂದ ಹೊರಗೆ ಬರಲು ನಿರಾಕರಿಸಿದ್ದಾರೆ. ಅಪರಿಚಿತ ಯುವಕರ ಚಲನವಲನಗಳಿಂದ ಅನುಮಾನಗೊಂಡ ಸುಧೀರ್ ಅವರ ಪತ್ನಿ ಕೂಡ ಪತಿಯನ್ನು ಮನೆಯಿಂದ ಹೊರಗೆ ಹೋಗದಂತೆ ತಡೆದಿದ್ದರು. ಅಪರಿಚಿತರ ಬಳಿ ಆಯುಧಗಳು ಇರುವುದನ್ನು ಗಮನಿಸಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಕಾಪು ಠಾಣೆ ಪೊಲೀಸರು ಆಸಿಫ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಬಳಿಕ ಅತ ಹಣದ ವಿಚಾರವಾಗಿ ಹೋಗಿದ್ದಾಗಿ ತಿಳಿದುಬಂದಿದೆ. ಕಾಪು ಪೊಲೀಸರು ಅತನಿಂದ ಮುಚ್ಚಳಿಕೆ ಬರೆಸಿಕೊಂಡಿದ್ದು ಪ್ರಕರಣವನ್ನು ಶಿರ್ವ ಠಾಣೆಗೆ ವರ್ಗಾಯಿಸಲಾಗಿದೆ.
PublicNext
01/08/2022 08:14 am