ಕುಂದಾಪುರ: ಗೋಸಾಗಾಟ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಗುಲ್ವಾಡಿ ಗ್ರಾಮದ ಅಬೂಬಕ್ಕರ್ (43)ನನ್ನು ಜಮಖಂಡಿಗೆ ಗಡೀಪಾರು ಮಾಡಿ ಕುಂದಾಪುರ ಉಪವಿಭಾಗಾಧಿಕಾರಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಈತನ ಮೇಲೆ ಗ್ರಾಮಾಂತರ ಠಾಣೆಯಲ್ಲಿ 9 ಪ್ರಕರಣಗಳು ದಾಖಲಾಗಿವೆ. ಜಾಮೀನಿನ ಮೇಲೆ ಹೊರಬಂದ ಬಳಿಕ ತಂಡ ಕಟ್ಟಿಕೊಂಡು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡು ಗೋಸಾಗಾಟದಂತಹ ಕೃತ್ಯದಲ್ಲಿ ಪದೆ ಪದೇ ಭಾಗಿಯಾಗುತ್ತಿದ್ದಾನೆ ಎಂದು ಠಾಣಾಧಿಕಾರಿ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು 6 ತಿಂಗಳ ಕಾಲ ಗಡೀಪಾರು ಮಾಡಲಾಗಿದೆ.
Kshetra Samachara
27/07/2022 09:40 am