ಉಡುಪಿ: ತೆಂಕನಿಡಿಯೂರಿನಲ್ಲಿ ಸೆಂಟ್ರಿಂಗ್ ಶೀಟ್ ಮತ್ತು ಪಿಲ್ಲರ್ ಬಾಕ್ಸ್ ಅನ್ನು ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ದೀಪಕ್ (19), ಸಾಗರ್ (36), ಇಮ್ತಿಯಾಜ್ ಎ (39) ಮತ್ತು ಮೊಹಮ್ಮದ್ ಇಕ್ಬಾಲ್ (35) ಬಂಧಿತ ಆರೋಪಿಗಳು. ಇದೇ ತಿಂಗಳ ಜುಲೈ 19ರಂದು ಉಡುಪಿ ತೆಂಕನಿಡಿಯೂರು ಎಂಬಲ್ಲಿ ಸೆಂಟ್ರಿಂಗ್‌ಗಾಗಿ ಉಮೇಶ್ ಎಂಬವರು ಸುಮಾರು 600 ಸೆಂಟ್ರಿಂಗ್ ಶೀಟ್ ಮತ್ತು 5-6 ಸೆಟ್ ಪಿಲ್ಲರ್ ಬಾಕ್ಸ್ ಅನ್ನು ತಮ್ಮ ಮನೆ ಪಕ್ಕದಲ್ಲಿ ಕೆಲಸಕ್ಕಾಗಿ ತಂದು ಹಾಕಿದ್ದರು. ಆರೋಪಿಗಳು ಸುಮಾರು 1,10,000 ರೂ. ಮೌಲ್ಯದ 80 ಸೆಂಟ್ರಿಂಗ್ ಶೀಟ್ ಮತ್ತು 4 ಪಿಲ್ಲರ್ ಬಾಕ್ಸ್ ಸೆಟ್‌ಗಳನ್ನು ಕಳವುಗೈದಿದ್ದರು. ಈ ಕುರಿತು ಉಮೇಶ್ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಂಧಿತರಿಂದ ಕಳವಾದ ಸೊತ್ತಿನ ಜೊತೆಗೆ ಕೃತ್ಯಕ್ಕೆ ಒಳಸಿದ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನ ಸೇರಿ ಒಟ್ಟು 1.80 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Kshetra Samachara
26/07/2022 10:23 pm