ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ : ಬಿಜೆಪಿ ಯುವ ನಾಯಕನ ಬರ್ಬರ ಹತ್ಯೆ

ಸುಳ್ಯ: ಬೆಳ್ಳಾರೆಯಲ್ಲಿ ಹಿಂದೂ ಸಂಘಟನೆಯ ಮುಖಂಡನನ್ನು ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಹೌದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆದಿರುವ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಪ್ರವೀಣ್ ನೆಟ್ಟಾರು (32) ಮೃತ ವ್ಯಕ್ತಿಯಾಗಿದ್ದಾರೆ.

ಬೈಕ್ ನಲ್ಲಿ ಬಂದ ತಂಡ ತಲವಾರಿನಿಂದ ದಾಳಿ ಮಾಡಿದೆ. ದಾಳಿಗೊಳಗಾದ ಪ್ರವೀಣ್ ರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾದರು ಪ್ರಯೋಜನವಾಗಿಲ್ಲ.

ಬೆಳ್ಳಾರೆ ಪೆಟ್ರೋಲ್ ಪಂಪ್ ಬಳಿಯ ಮಾಸ್ತಿ ಕಟ್ಟೆ ಎಂಬಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಮೇಲೆ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಇತ್ತೀಚೆಗಷ್ಟೇ ಬೆಳ್ಳಾರೆಯ ಕಳಂಜ ಎಂಬಲ್ಲಿ ಮಸೂದ್ ಎಂಬ ಮುಸ್ಲಿಂ ಯುವಕನನ್ನು ಸಂಘಪರಿವಾರದ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಗೈದಿದ್ದರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ರಿವೆಂಜ್ ಪಡೆದುಕೊಂಡಿರಬಹುದು ಎಂದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

26/07/2022 10:22 pm

Cinque Terre

44.77 K

Cinque Terre

24

ಸಂಬಂಧಿತ ಸುದ್ದಿ