ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಬ್‌ನಲ್ಲಿದ್ದ ವಿದ್ಯಾರ್ಥಿಗಳ ಪೈಕಿ 8 ಮಂದಿ ಅಪ್ರಾಪ್ತರು; ಪೊಲೀಸ್ ಕಮಿಷನರ್

ಮಂಗಳೂರು: ನಗರದ ಬಲ್ಮಠದಲ್ಲಿ ನಿನ್ನೆ ಬಜರಂಗದಳದ ಕಾರ್ಯಕರ್ತರು ಪಬ್ ಪ್ರವೇಶಿಸಿರುವ ಪ್ರಕರಣದಲ್ಲಿ ಪಬ್‌ನಲ್ಲಿದ್ದ 18 ಮಂದಿ ವಿದ್ಯಾರ್ಥಿಗಳ ಪೈಕಿ 8 ಮಂದಿ ಅಪ್ರಾಪ್ತರು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.

ಮಂಗಳೂರಿನ ಬಲ್ಮಠದಲ್ಲಿರುವ ರಿ ಸೈಕಲ್ ದಿ ಲಾಂಜ್ ಪಬ್‌ನಲ್ಲಿ ನಗರದ ಕಾಲೇಜೊಂದರ ವಿದ್ಯಾರ್ಥಿಗಳು ಪಬ್‌ನಲ್ಲಿ ಮೋಜು - ಮಸ್ತಿಯಲ್ಲಿ ತೊಡಗಿದ್ದರೆಂದು ಬಜರಂಗದಳದ ಕಾರ್ಯಕರ್ತರು ಪಬ್ ಪ್ರವೇಶಿಸಿದ್ದರು. ಈ ವೇಳೆ ಪಬ್‌ನೊಳಗೆ ಅಪ್ರಾಪ್ತರೂ ಮದ್ಯ ಸೇವಿಸಿರುವ ಬಗ್ಗೆ ಮಾಹಿತಿಯಿದೆ. ನಿಯಮದ ಪ್ರಕಾರ 21 ವರ್ಷದ ಒಳಗಿನವರಿಗೆ ಪಬ್ ಒಳಗೆ ಪ್ರವೇಶ ಇಲ್ಲ. ಪಬ್ ವಿರುದ್ಧ ಕ್ರಮಕ್ಕೆ ಅಬಕಾರಿ ಇಲಾಖೆಗೆ ಸೂಚಿಸಲಾಗಿದೆ ಎಂದು ಎನ್. ಶಶಿಕುಮಾರ್ ತಿಳಿಸಿದರು.

Edited By : Vijay Kumar
Kshetra Samachara

Kshetra Samachara

26/07/2022 07:30 pm

Cinque Terre

7.36 K

Cinque Terre

1

ಸಂಬಂಧಿತ ಸುದ್ದಿ