ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಸೋಮೇಶ್ವರ ರೈಲ್ವೆ ಗೋದಾಮಿನಿಂದ‌ವಿದ್ಯುತ್ ತಂತಿ ದೋಚುತ್ತಿದ್ದ ಟೆಂಪೊ ಪಲ್ಟಿ,ಆಸ್ಪತ್ರೆ ಸೇರಿದ ಆರೋಪಿಗಳು!

ಉಳ್ಳಾಲ: ರೈಲ್ವೆ ಇಲಾಖೆ ಗೋದಾಮಿನಲ್ಲಿದ್ದ ಲಕ್ಷಾಂತರ‌ ರೂಪಾಯಿ ಮೌಲ್ಯದ ವಿದ್ಯುತ್ ತಂತಿಗಳನ್ನ ಕಳವುಗೈದು ಪರಾರಿಯಾಗುತ್ತಿದ್ದ ಟೆಂಪೊವೊಂದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಉರುಳಿಬಿದ್ದು ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

ಗುರುವಾರ ಮುಂಜಾನೆ 2.30 ಗಂಟೆ ಸುಮಾರಿಗೆ ಘಟನೆ ನಡೆದಿದೆ.ಸೋಮೇಶ್ವರ ಬಳಿ ರೈಲ್ವೆ ಕಾಮಗಾರಿಗಾಗಿ ಗೋದಾಮಿನಲ್ಲಿ ಇರಿಸಿದ್ದ ಲಕ್ಷಾಂತರ ಬೆಳೆಬಾಳುವ ವಿದ್ಯುತ್ ತಂತಿಗಳನ್ನು ಕಳವು ಮಾಡಿ, ಟೆಂಪೋದಲ್ಲಿ ಮಂಗಳೂರು ಕಡೆ ತೆರಳುತ್ತಿದ್ದಾಗ ಓವರ್ ಬ್ರಿಡ್ಜ್ ನಿಂದ ತೊಕ್ಕೊಟ್ಟು ಒಳಪೇಟೆ ಸಂಪರ್ಕದ ಇಳಿಜಾರು ರಸ್ತೆಯಲ್ಲಿ ಟೆಂಪೊ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ.

ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಟೆಂಪೋದಲ್ಲಿದ್ದ ಆರೋಪಿಗಳನ್ನ ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದು ಉಳ್ಳಾಲ ಪೊಲೀಸರು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಇಬ್ಬರು ಮಹಿಳೆಯರ ಸಹಿತ ನಾಲ್ಕು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ.ತಮಿಳುನಾಡು ಮೂಲದ ಸದ್ರಿ ಸೂಟರ್ ಪೇಟೆಯ ನಿವಾಸಿ ವೆಂಕಟೇಶ, ಹೊಯ್ಗೆ ಬಜಾರಿನ ಜಯಲಕ್ಷ್ಮಿ,ನಂದಿನಿ ಹಾಗೂ ಮೂಲ್ಕಿಯ ರಾಜ್ ಕುಮಾರ್ ಪೊಲೀಸರ ವಶದಲ್ಲಿದ್ದಾರೆ.ಜಯಲಕ್ಷ್ಮಿ ,ನಂದಿನಿ ಹಾಗೂ ವೆಂಕಟೇಶನ ಮೇಲೆ ಈ ಮೊದಲೇ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.ಕಳ್ಳತನ ಮಾಡಿದ್ದ ವಿದ್ಯುತ್ ತಂತಿಯ ಮೌಲ್ಯ 3.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.ಗಾಯಾಳು ಆರೋಪಿಗಳನ್ನ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Edited By :
Kshetra Samachara

Kshetra Samachara

22/07/2022 10:02 pm

Cinque Terre

9.26 K

Cinque Terre

0

ಸಂಬಂಧಿತ ಸುದ್ದಿ