ಪುತ್ತೂರು: ಕೆಲಸ ಕೊಡಿಸುವ ನೆಪದಲ್ಲಿ ಪುತ್ತೂರಿಗೆ ಯುವತಿಯೋರ್ವಳನ್ನು ಕರೆ ತಂದ ಅನ್ಯಕೋಮಿನ ಯುವಕನೋರ್ವನನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಯುವತಿಯ ಜೊತೆಗೆ ಪೊಲೀಸ್ ವಶಕ್ಕೆ ನೀಡಿದ್ದಾರೆ.
ಫೇಸ್‌ಬುಕ್ ಮೂಲಕ ಯುವತಿಯ ಪರಿಚಯವಾಗಿ ಯುವಕ ಕೆಲಸ ಕೊಡಿಸುವುದಾಗಿ ಆಕೆಯನ್ನು ಪುತ್ತೂರಿಗೆ ಕರೆತಂದಿದ್ದರು. ಈ ವಿಚಾರವನ್ನು ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಇಬ್ಬರನ್ನೂ ಪುತ್ತೂರು ನಗರ ಪೋಲೀಸರ ವಶಕ್ಕೆ ನೀಡಿದ್ದಾರೆ.
ಯುವಕ ಕಡಬ ತಾಲೂಕಿನ ಸವಣೂರಿನ ಅಶ್ರಫ್ ಎಂದು ಗುರುತಿಸಲಾಗಿದ್ದು, ನಗರ ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
21/07/2022 06:42 pm