ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಕೊಟ್ಟ ಹಣ ವಾಪಸ್ ನೀಡದೆ ವಂಚನೆ, ನಿಂದನೆ- ಮಹಿಳೆಯಿಂದ ದೂರು

ಬಂಟ್ವಾಳ: ಸಾಲಾಗಿ ನೀಡಿದ್ದ ಹಣವನ್ನು ವಾಪಸ್ ಕೇಳಿದ ಸಂದರ್ಭ ನೀಡದೆ ವಂಚಿಸಿ, ನಿಂದಿಸಿದ್ದಾಗಿ ಮಹಿಳೆಯೊಬ್ಬರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ನೊಂದ ಮಹಿಳೆ ಜೀನತ್ ಎಂಬವರು ಪಾಣೆಮಂಗಳೂರು ಜೈನರಪೇಟೆಯ ಅಲೀಮಮ್ಮ, ಹಫೀಝಾ ಫಾತಿಮ, ಹಫೀಲ್ ಎಂಬವರ ವಿರುದ್ಧ ಆರೋಪಿಸಿ ದೂರು ನೀಡಿದ್ದಾರೆ.

ಸಾಲದ ರೂಪದಲ್ಲಿ 7,55,000 ಹಣವನ್ನು ನಂದಾವರದ ಮಹಿಳೆ ನೀಡಿದ್ದು, ಮೊದಲ ಕಂತಿನ ಹಣವನ್ನು ಬಿಟ್ಟು ಉಳಿದ ಕಂತಿನ ಹಣಕ್ಕೆ ನೋಟರಿ ಬಳಿಯಲ್ಲಿ ಕರಾರು ಪತ್ರ ಮಾಡಿದ್ದು, ಅದಕ್ಕೆ ಆರೋಪಿಗಳು ಸಾಕ್ಷಿಯಾಗಿ ಸಹಿ ಮಾಡಿದ್ದಾರೆ. ಪ್ರಾರಂಭದ ಕೆಲ ತಿಂಗಳು ಬಡ್ಡಿಯ ಹಣ ನೀಡಿದ್ದು, ನಂತರ ನೀಡದೆ ಸತಾಯಿಸಿದ್ದಾರೆ. ಹಣ ಕೊಡುವಂತೆ ವಿನಂತಿಸಿದಾಗ ಮೇ 10ರಂದು ಹಣ ಮರುಪಾವತಿಗೆ ಚೆಕ್ ನೀಡಿದ್ದು, ಅದನ್ನು ನಗದುಪಡಿಸಲು ನೀಡಿದಾಗ ಚೆಕ್ಕು ಮಾನ್ಯ ಮಾಡಲಾಗದು, ಹೊಸ ಚೆಕ್ ಪಡೆಯಿರಿ ಎಂದು ಬ್ಯಾಂಕಿನವರು ತಿಳಿಸಿದಂತೆ ಮತ್ತೆ ಮೇ 30ರಂದು ಹೊಸ ಚೆಕ್ ಪಡೆದಿದ್ದಾರೆ. ಅದರಂತೆ ಜೂನ್ 2ರಂದು ಚೆಕ್‌ಅನ್ನು ನಗದೀಕರಿಸಲು ನೀಡಿದಾಗ ಮಾನ್ಯ ಮಾಡದೇ ಇರುವಂತೆ ಆರೋಪಿ ನಿರ್ದೇಶನ ನೀಡಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ಹಣ ನೀಡುವಂತೆ ಆರೋಪಿಗಳನ್ನು ಕೇಳಿದಾಗ, ಅವಾಚ್ಯವಾಗಿ ನಿಂದಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

17/07/2022 07:08 pm

Cinque Terre

7.29 K

Cinque Terre

0

ಸಂಬಂಧಿತ ಸುದ್ದಿ