ಕಾಣಿಯೂರು: ಕಾಣಿಯೂರು ಸಮೀಪ ಬೈತಡ್ಕ ನದಿಯಲ್ಲಿ ಕಾರು ಪಲ್ಟಿಯಾಗಿ ಕಾಣೆಯಾದವರ ಪೈಕಿ ಒಬ್ಬನ ಮೃತದೇಹ ಪತ್ತೆಯಾಗಿದೆ.
ಇಂದು ಬೆಳಿಗ್ಗೆ 8 ಗಂಟೆ ಸಮೀಪ ಬೈತಡ್ಕ ಸೇತುವೆಯಿಂದ 250 ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯರ ಮನೆಯ ಬಳಿ ಹೊಳೆಯಲ್ಲಿ ಒಂದು ಮೃತದೇಹ ಪತ್ತೆಯಾಗಿದೆ.
ಮೃತದೇಹ ಊರಿನವರಿಗೆ ಸಿಕ್ಕಿದೆ ಎನ್ನಲಾಗಿದೆ. ಜು.10 ರಂದು ಬೈತಡ್ಕ ಸೇತುವೆಯಿಂದ ಕಾರು ಪಲ್ಟಿಯಾಗಿ, ಇಬ್ಬರು ವಿಟ್ಲ ಮೂಲದ ಯುವಕರು ನೀರುಪಾಲಗಿದ್ದರು. ಕಾರು ಜು.10ರಂದೇ ಮಧ್ಯಾಹ್ನ ಪತ್ತೆ ಹಚ್ಚಲಾಗಿತ್ತು.
Kshetra Samachara
12/07/2022 09:57 am