ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಪತಿ ಮನೆಯಲ್ಲಿ ಗೃಹಿಣಿ ನಿಗೂಢ ಸಾವು: ಕೊಲೆ ಶಂಕೆ

ಉಳ್ಳಾಲ: ಗೃಹಿಣಿಯೋರ್ವಳು ಗಂಡನ ಮನೆಯಲ್ಲೇ ನಿಗೂಢ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಉಳ್ಳಾಲ ಮುಕ್ಕಚ್ಚೇರಿ ಎಂಬಲ್ಲಿ ನಡೆದಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ಮೃತ ಮಹಿಳೆಯನ್ನು ಜಂಶೀರ (25) ಎಂದು ಗುರುತಿಸಲಾಗಿದೆ. ಮೂಲತ: ಮಿಲ್ಲತ್ ನಗರ ನಿವಾಸಿಯಾದ ಜಂಶೀರ ಎರಡು ವರ್ಷಗಳ ಹಿಂದೆ ಮುಕ್ಕಚ್ಚೇರಿ ನಿವಾಸಿ ಇರ್ಫಾನ್ ನನ್ನ ವಿವಾಹವಾಗಿದ್ದರು.ದಂಪತಿಗೆ 8 ತಿಂಗಳ ಗಂಡು ಮಗುವೂ ಇದೆ. ವಿವಾಹ ಆದ ಆರಂಭದಲ್ಲೇ ದಂಪತಿ ನಡುವೆ ಜಗಳ ನಡೆಯುತ್ತಿತಂತೆ.ಹಿರಿಯರು ಸೇರಿ ಮಾತುಕತೆ ನಡೆಸಿ ದಂಪತಿ ನಡುವಿನ ಕಲಹ ಶಮನಗೊಳಿಸುತ್ತಿದ್ದರು.ಭಾನುವಾರ ಸಂಜೆಯೂ ಗಂಡ ಹೆಂಡಿರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ.

ಘಟನೆಯು ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ನಡೆದಿದ್ದು ಜಂಶೀರಳ ಸಹೋದರಿಗೆ ಆಕೆಯ ಗಂಡನ ಮನೆಯವರಿಂದ ಫೋನ್ ಕರೆ ಬಂದಿದ್ದು ಜಂಶೀರ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಆಕೆ ಯನ್ನು ಆಸ್ಪತ್ರೆಗೆ ಸೇರಿಸಿದ್ದು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.ಆದರೆ ಮನೆಮಗಳ ನಿಗೂಢ ಸಾವಿನ ಬಗ್ಗೆ ಜಂಶೀರ ಪೋಷಕರು ಶಂಕೆ ವ್ಯಕ್ತ ಪಡಿಸಿದ್ದಾರೆ.ಮೃತ ಜಂಶೀರಳ ಮೃತದೇಹವನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದೆ.ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಸಾವಿನ ಹಿಂದಿನ ಅಸಲಿಯತ್ತು ಬೆಳಕಿಗೆ ಬರಲಿದೆ. ಮೃತ ಜಂಶೀರಳ ಪತಿ ಇರ್ಫಾನ್ ನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

11/07/2022 01:42 pm

Cinque Terre

11.34 K

Cinque Terre

0

ಸಂಬಂಧಿತ ಸುದ್ದಿ