ಕಾಪು : ಮಸೀದಿಗೆ ಹೋಗಿದ್ದ ಯುವಕನನ್ನು ನಾಲ್ಕು ಮಂದಿಯ ತಂಡ ಅಪಹರಣ ಮಾಡಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಪು ತಾಲೂಕಿನ ಪಣಿಯೂರು - ಬೆಳಪು ಮಾರ್ಗದ ಮಧ್ಯೆ ಜುಲೈ.8ರಂದು ಈ ಘಟನೆ ನಡೆದಿದೆ.
ಕಳತ್ತೂರು ಸೂರ್ಯಗುಡ್ಡೆಯ ಅಬ್ದುಲ್ ಖಾದರ್ ಅವರ ಮಗ 19 ವರ್ಷದ ಪ್ರಾಯ ನೌಫಲ್ ಅಪಹರಣಕ್ಕೆ ಒಳಗಾದ ಯುವಕ. ಈತ ಸಾಹಿಬ್ ಎಂಬವರೊಂದಿಗೆ ನಿನ್ನೆ ಮಧ್ಯಾಹ್ನ ಬೆಳಪು ಮಸೀದಿಗೆ ಹೋಗಿದ್ದರು. ಈ ವೇಳೆ ಆರೋಪಿ ದಾವೂದ್ ಇಬ್ರಾಹಿಂ ಎಂಬಾತ ತನ್ನ ಸಂಗಡಿಗರೊಂದಿಗೆ ಕಾರಿನಲ್ಲಿ ಬಂದು ನೌಫಲ್ ನನ್ನು ಅಪಹರಣ ಮಾಡಿಕೊಂಡು ಹೋಗಿದ್ದಾಗಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/07/2022 03:04 pm