ವಿಟ್ಲ: ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಕೊಡಾಜೆಯಲ್ಲಿ ನಡೆದಿದೆ.
ಮೊಹಮ್ಮದ್ ಅವರ ಪುತ್ರ ಅಬ್ಧುಲ್ ನಝೀರ್(19) ಮೃತ ದುರ್ದೈವಿ.
ನಝೀರ್ ಇಂದು ಸಂಜೆ ಕೊಡಜೆಯ ಪ್ಲಾಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲತಃ ಬುಡೋಳಿ ನಿವಾಸಿ ಇವರು ಕೊಡಜೆಯಲ್ಲಿ ಇತ್ತೀಚಿನಿಂದ ವಾಸಿಸುತ್ತಿದ್ದರು.
ಉಪ್ಪಳದಲ್ಲಿ ಕೆಲಸದಲ್ಲಿದ್ದ ಯುವಕ ಎರಡು ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದ. ಇಂದು ಮನೆಯಲ್ಲಿ ಎಲ್ಲರೂ ಇದ್ದರು, ಆದರೆ ಈತ ಮಾತ್ರ ಕೊಠಡಿಗೆ ಬೀಗ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Kshetra Samachara
06/07/2022 08:36 pm