ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ನೆಲ್ಲಿಗುಡ್ಡೆ ಬಳಿ ಚಿರತೆ ನಾಯಿ ಮೇಲೆ ದಾಳಿ ಮಾಡಿದ್ದು, ನಾಯಿ ಗಂಭೀರ ಗಾಯಗೊಂಡಿದೆ. ಐಕಳ ನೆಲ್ಲಿಗುಡ್ಡೆ ನಿವಾಸಿ ಸುಧಾಕರ ಪೂಜಾರಿ ಎಂಬುವರ ನಾಯಿ ಬುಧವಾರ ಮಧ್ಯರಾತ್ರಿ ಎರಡೂವರೆ ಗಂಟೆಗೆ ಬೊಗಳುವ ಶಬ್ದ ಕೇಳಿ ಸುಧಾಕರ ಪೂಜಾರಿ ಅವರು ಹೊರಗೆಬಂದು ನೋಡಿದ್ದಾರೆ.
ಈ ಸಂದರ್ಭ ನಾಯಿಯ ಕುತ್ತಿಗೆಯಲ್ಲಿ ಬಲವಾದ ಗಾಯ ಕಂಡು ಬಂದಿದ್ದು ಶಬ್ದ ಕೇಳಿ ಚಿರತೆ ಸ್ಥಳದಿಂದ ಪರಾರಿಯಾಗಿದೆ. ಕಳೆದ ಕೆಲವು ತಿಂಗಳಿನಿಂದ ಕಿನ್ನಿಗೋಳಿ, ಐಕಳ, ಉಳೆಪಾಡಿ ಕೊಲ್ಲೂರು ಪದವು ಬಳಿ ಕಾಣಿಸಿಕೊಂಡಿದ್ದ ಚಿರತೆ ಏಕಾಏಕಿ ಐಕಳ ನೆಲ್ಲಿಗುಡ್ಡೆ ಬಳಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.
Kshetra Samachara
30/06/2022 09:04 pm