ಉಡುಪಿ: ಮುಸ್ಲಿಂ ಮೂಲಭೂತವಾದವನ್ನು ವಿರೋಧಿಸಿ ಬರೆದಾಗಲೆಲ್ಲ ,ನಾನು ಹಿಂದೂಗಳನ್ನು ಮೆಚ್ಚಿಸಲು ಪೋಸ್ಟ್ ಹಾಕುತ್ತಿದ್ದೇನೆ ಎಂದು ಮೂದಲಿಸಿದವರೆಲ್ಲ ನಿನ್ನೆಯ ಉದಯ್ ಪುರ ಘಟನೆ ನಡೆದ ನಂತರ ಬೆಚ್ಚಿ ಬಿದ್ದಿದ್ದಾರೆ.
ನಿನ್ಬೆಯ ಪೈಶಾಚಿಕ ಕೃತ್ಯ ನನ್ನನ್ನು ತಲ್ಲಣಗೊಳಿಸಿದರೂ ಮೊಹಮ್ಮದ್ ಮತ್ತು ರಿಯಾಜ್ ಎಸಗಿರುವ ಧರ್ಮದ ಹೆಸರಿನ ಕೊಲೆ ನನಗೆ ತುಂಬ ಆಶ್ಚರ್ಯ ತರಲಿಲ್ಲ. ಯಾಕೆಂದರೆ ಮೂಲಭೂತವಾದದ ಅಪಾಯ ಮತ್ತದರ ತೀವ್ರತೆಯ ಅಂದಾಜು ನನಗಿದೆ. ಇವರಿಬ್ವರು ಕೊಲೆ ಮಾಡಿದ್ದಾರೆ.
ಆದರೆ ಕೊಲೆ ಎಸಗದೆಯೂ ಇಂತಹ ಮನಸ್ಥಿತಿ ಉಳ್ಳವರು ದೇಶದಲ್ಲಿ ಇನ್ನೂ ಇದ್ದಾರೆ. ಅಂಥವರನ್ನು ನಿರ್ಮೂಲನೆ ಮಾಡುವ ಕಾರ್ಯ ಆಗಬೇಕು. ಇದು ಅಪ್ಪಟ ಮೂಲಭೂತವಾದದ ಫಸಲು. ಈ ಇಬ್ಬರು ಪಾತಕಿಗಳಿಗೆ ಉಗ್ರ ಶಿಕ್ಷೆ ಆಗಲಿ. ಹಾಗೆಯೇ ಮುಸ್ಲಿಂ ಸಮುದಾಯದ ತಲೆಗೆ ಮೂಲಭೂತವಾದದ "ಭೂತ"ತುಂಬುವವರಿಗೆ ಈ ಘಟನೆಯಿಂದಲಾದರೂ ಜ್ಞಾನೋದಯ ಆಗಲಿ ಎಂದು ಆಶಿಸುವೆ.
- ರಹೀಂ ಉಜಿರೆ
ಜಿಲ್ಲಾ ವರದಿಗಾರ - ಪಬ್ಲಿಕ್ ನೆಕ್ಸ್ಟ್ , ಉಡುಪಿ
PublicNext
29/06/2022 10:30 am