ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಮಾವು ಕೀಳಲು ಮರ ಹತ್ತಿದ್ದಾಗ ವಿದ್ಯುತ್ ಹೈಟೆನ್ಷನ್ ತಂತಿ ತಗುಲಿ ಯುವಕ ದಾರುಣ ಸಾವು

ಉಳ್ಳಾಲ: ಮಾವಿನ ಹಣ್ಣು ಕೀಳಲು ಮರ ಹತ್ತಿದ್ದ ವೇಳೆ ವಿದ್ಯುತ್ ಹೈಟೆನ್ಷನ್ ತಂತಿ ತಗುಲಿ ಯುವಕನೋರ್ವ ಮರದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ಎಂಬಲ್ಲಿ ಇಂದು ಸಂಜೆ ವೇಳೆ ನಡೆದಿದೆ.

ಮಹಮ್ಮದ್ ಇಲಿಯಾಸ್ (23) ಮೃತ ದುರ್ದೈವಿ. ಹರೇಕಳ ಉಲ್ಲಾಸ್ ನಗರದ ನಿವಾಸಿಯಾದ ಇಲಿಯಾಸ್ ಸಂಜೆ ವೇಳೆ ದೇರಳಕಟ್ಟೆಯ ಜಲಾಲ್ ಭಾಗ್‌ನ ಫ್ಲೋರಿನ್ ಡಿಸೋಜಾ ಎಂಬುವರ ಮನೆ ಆವರಣದೊಳಗಿನ ಮಾವಿನ ಮರ ಹತ್ತಿ ಕಾಯಿ ಕೀಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಯುವಕನ ಸಾವಿಗೆ ಮೆಸ್ಕಾಂ ಇಲಾಖೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಾವಿನ ಮರದ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದರೂ ಗೆಲ್ಲುಗಳನ್ನು ಕಟಾವು ಮಾಡದೆ ಇದ್ದುದರಿಂದ ಘಟನೆ ನಡೆದಿರುವುದಾಗಿ ಆರೋಪಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

24/06/2022 11:00 pm

Cinque Terre

17.81 K

Cinque Terre

2

ಸಂಬಂಧಿತ ಸುದ್ದಿ