ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಸಾಯಿಖಾನೆಗೆ ಹಸುಗಳ ಸಾಗಾಟ: ವಾಹನ ಸಮೇತ ಮೂವರು ಅರೆಸ್ಟ್

ಮಂಗಳೂರು: ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಬಜ್ಪೆ ಪೊಲೀಸರು 4 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ‌.

ಮೂಡುಬಿದಿರೆ ತಾಲೂಕಿನ ಪುತ್ತಿಗೆಯ ಹಂಡೇಲು ನಿವಾಸಿ ಅಬ್ದುಲ್ ಫಾರೂಕ್(41), ಬಡಗ ಮಿಜಾರು ಗ್ರಾಮ ನಿವಾಸಿ ಅಬೂಬಕ್ಕರ್(45), ತೋಡಾರು ನಿವಾಸಿ ಶಿವ(60) ಬಂಧಿತ ಆರೋಪಿಗಳು.

ಆರೋಪಿಗಳು ಬಜ್ಪೆ ಠಾಣಾ ವ್ಯಾಪ್ತಿಯ ದಡ್ಡಿ ಕ್ರಾಸ್ ಬಳಿ ಪಿಕ್ಅಪ್ ವಾಹನವೊಂದರಲ್ಲಿ 4 ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಬಜ್ಪೆ ಠಾಣಾ ಪೊಲೀಸರು ಜಾನುವಾರು ಸಾಗಾಟದ ಪಿಕ್ಅಪ್ ಮೇಲೆ ದಾಳಿ ನಡೆಸಿದ್ದಾರೆ. ಬಳಿಕ ಅಕ್ರಮ ಸಾಗಾಟದ ನಾಲ್ಕು ಜಾನುವಾರುಗಳ ಸಹಿತ ಪಿಕ್ಅಪ್ ಅನ್ನು ವಶಪಡಿಸಿಕೊಂಡ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ‌.

ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

23/06/2022 08:29 pm

Cinque Terre

6.98 K

Cinque Terre

0

ಸಂಬಂಧಿತ ಸುದ್ದಿ