ಕಾಪು: ಮಾರಿ ಗುಡಿ_06 ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಮುತಾಲಿಕ್ ಹಾಗೂ ಯಶ್ಪಾಲ್ ಸುವರ್ಣ ರಿಗೆ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಮಹಮ್ಮದ್ ಶಫಿ ಬಂಧಿತ ಆರೋಪಿಯಾಗಿದ್ದು,ಈತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳೂರಿನ ಸುರತ್ಕಲ್‌ನಲ್ಲಿ ಆರೋಪಿಯನ್ನು ಇವತ್ತು ಪೊಲೀಸರು ಬಂಧಿಸಿದರು.ಮಹಮ್ಮದ್ ಶಫಿ ಮಂಗಳೂರಿನ ಬಜ್ಪೆ ನಿವಾಸಿಯಾಗಿದ್ದು ಸುರತ್ಕಲ್ ಭಾಗದಲ್ಲಿ ಲಾಜಿಸ್ಡಿಕ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.ಮಳಲಿ ಮಸೀದಿ ವಿವಾದದ ಬಳಿಕ ಆರೋಪಿಗೆ ಯಶಪಾಲ್ ಸುವರ್ಣ ಮೇಲೆ ಸಿಟ್ಟು ಇರುವುದಾಗಿ ಒಪ್ಪಿಕೊಂಡಿದ್ದಾನೆ.ಈತನ ಜೊತೆಗೆ ಕೈಜೋಡಿಸಿರುವ ಮಹಮ್ಮದ್ ಆಸಿಫ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಎರಡನೇ ಆರೋಪಿ ಮಹಮ್ಮದ್ ಆಸಿಫ್ ಅಲಿಯಾಸ್ ಆಶಿಕ್ ಸದ್ಯ ದುಬೈ ನಲ್ಲಿ ನೆಲೆಸಿದ್ದಾನೆ. ಇದೀಗ ಮಹಮ್ಮದ್ ಶಫಿ ಬಂಧನದ ಬಳಿಕ ಇನ್ಸ್ಟಾಗ್ರಾಮ್ ನ ಮಾರಿಗುಡಿ ಪೇಜ್ ನಲ್ಲಿರುವ ಎಲ್ಲಾ ಪೋಸ್ಟ್ ಡಿಲಿಟ್ ಮಾಡಲಾಗಿದೆ ಎಂದು ಎಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ.
Kshetra Samachara
18/06/2022 08:53 pm