ಮುಲ್ಕಿ: ಕಳೆದ ನಾಲ್ಕು ತಿಂಗಳ ಹಿಂದೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಪಾನ್ ಅಂಗಡಿ ನಡೆಸುತ್ತಿದ್ದ ಮುಲ್ಕಿಯ ಅಂಗರಗುಡ್ಡೆ ಯುವಕ ಆದರ್ಶ ದಾಸ್ ಎಂಬವರು ರಾತ್ರಿ ಪಾನ್ ಅಂಗಡಿಯಲ್ಲಿ ಕೆಲಸ ಮುಗಿಸಿ ನಾಸಿಕ್ ನಲ್ಲಿರುವ ತಮ್ಮ ಮನೆಗೆ ತೆರಳುತ್ತಿರುವಾಗ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು.
ಈ ಸಂದರ್ಭ ಅಂಗರ ಗುಡ್ಡೆಯಲ್ಲಿರುವ ಮೃತನ ಮನೆಯವರ ತೀವ್ರ ಅಸಹಾಯಕತೆಯನ್ನು ಮನಗಂಡು ಅತಿಕಾರಿಬೆಟ್ಟು ಗ್ರಾಪಂ ಮಾಜಿ ಸದಸ್ಯ ಜೀವನ್ ಶೆಟ್ಟಿ ಅಂಗರಗುಡ್ಡೆ, ನಾಸಿಕ್ ನ ಪಾನ್ ಅಂಗಡಿ ಮಾಲೀಕ ಅನಿಲ್ ಪೂಜಾರಿ, ಶಿಮಂತೂರು ನಿವಾಸಿ ಪ್ರತೀಕ್ ಶೆಟ್ಟಿ ಮತ್ತಿತರರು ಸೇರಿ ಆಂಬುಲೆನ್ಸ್ ಮೂಲಕ ನಾಸಿಕ್ ನಿಂದ ಮೃತಶರೀರವನ್ನು ಹುಟ್ಟೂರಾದ ಮುಲ್ಕಿ ಅಂಗರಗುಡ್ಡೆ ಗೆ ತರಿಸಿ ಅಂತಿಮ ಕ್ರಿಯಾ ಕರ್ಮಗಳಲ್ಲಿ ಸಹಕರಿಸಿದ್ದರು.
ಆದರೆ ಮನುಷ್ಯ ಬಗೆದದ್ದೇ ಒಂದು ಆದದ್ದೆ ಒಂದು ಎಂಬಂತೆ ಮಾನವೀಯತೆ ತೋರಿ ಅಂತಿಮ ಕ್ರಿಯೆಗಳಲ್ಲಿ ಸಹಾಯಹಸ್ತ ಮಾಡಿದ ಮೂವರ ಮೇಲೆ ಮೃತ ಆದರ್ಶ ದಾಸ್ ಮನೆಯವರು ನಾಸಿಕ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.ಇದರಿಂದಾಗಿ ಸಹಾಯ ಮಾಡಿದವರು ಸಂಪೂರ್ಣ ಕುಗ್ಗಿ ಹೋಗಿದ್ದು ಮುಲ್ಕಿಯ ಅಂಗರಗುಡ್ಡೆಯಿಂದ ಸಾವಿರಾರು ಮೈಲಿಗಳ ದೂರವಿರುವ ಮಹಾರಾಷ್ಟ್ರದ ನಾಸಿಕ್ ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ.
Kshetra Samachara
10/06/2022 08:38 am