ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಫೋಟೋ ಹಾಕಿ ವ್ಯಕ್ತಿಯೋರ್ವರನ್ನು ಬೆದರಿಸಿದ ಘಟನೆ ನಡೆದಿದೆ
ಪ್ರಸ್ತುತ ಬಾಗಲಕೋಟೆಯ ಮೂಲತಃ ಬರುತಿ ನಿವಾಸಿ ಅಶೋಕ್ ಶೆಟ್ಟಿ ಅವರು ಇತ್ತೀಚೆಗೆ ಲೂಡೋ ಅಪ್ ಡೌನ್ ಲೌಡ್ ಮಾಡಿಕೊಂಡಿದ್ದರು.
ಸ್ವಲ್ಪ ಸಮಯದ ಬಳಿಕ ಮಹಿಳೆಯೊಬ್ಬರು ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ. ಅನಂತರ ಅವರ ಫೋಟೋಗಳನ್ನು ಎಡಿಟ್ ಮಾಡಿ 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಕೊಡದಿದ್ದಾಗ ಆ ವೀಡಿಯೋವನ್ನು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಿದ್ದಾರೆ. ಈ ಬಗ್ಗೆ ಆಶೋಕ್ ಶೆಟ್ಟಿ ಅವರು ಬಾಗಲಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Kshetra Samachara
21/05/2022 04:28 pm