ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಂಬಿಕೆ ಗಳಿಸಿ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ 1.50 ಕೋಟಿ ರೂ‌. ವಂಚನೆ

ಮಂಗಳೂರು: ಮನೆಯವನಂತೆಯೇ ಇದ್ದು, ಮನೆ ಮಂದಿಯ ನಂಬಿಕೆ ಗಳಿಸಿದ ಕಾಮುಕನೋರ್ವನು ಮನೆಯೊಡತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ 1.50 ಕೋಟಿ ರೂ. ವಂಚನೆಗೈದಿರುವ ಆರೋಪಿಯನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ವಿಟ್ಲ ಬೈರಿಕಟ್ಟೆಯ ನಿವಾಸಿ ಸದ್ಯ ಮಂಗಳೂರಿನಲ್ಲಿರುವ ಫಯಾಝ್(30) ಬಂಧಿತ ಆರೋಪಿ. ಫಯಾಝ್‌ಗೆ ಸಂತ್ರಸ್ತ ಮಹಿಳೆ 2012ರಲ್ಲಿಯೇ ಪರಿಚಿತನಾಗಿದ್ದ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು, ಈತ ಆಕೆಯ ಕುಟುಂಬದ ನಂಬಿಕೆಯನ್ನು ಗಳಿಸಿದ್ದ. ಮಹಿಳೆಗೆ ಮೂವರು ಮಕ್ಕಳಿದ್ದು, ಅವರಲ್ಲಿ ಇಬ್ಬರು ವಿಶೇಷ ಚೇತನರಾಗಿದ್ದಾರೆ. ಆತ ಅವರ ಮೇಲೆ ಕರುಣೆ ತೋರಿಸುವಂತೆ ಶಾಲೆಗೆ ಕರೆದೊಯ್ಯವಂತೆ, ಇನ್ನಿತರ ಸಹಕಾರ ನಾಟಕವಾಡುತ್ತಿದ್ದ. ಹೀಗೆ ಹಂತ ಹಂತವಾಗಿ ಅವರ ನಂಬಿಕೆ ಗಳಿಸಿದ್ದ. ಮಹಿಳೆಯ ಪತಿ ಉದ್ಯಮಿಯಾಗಿದ್ದು, ಸಾಕಷ್ಟು ಸ್ಥಿತಿವಂತರೂ ಆಗಿದ್ದರು‌. ಹೀಗೆ ಅವರಲ್ಲಿದ್ದ ಹಣ ಹಾಗೂ ಮಹಿಳೆಯ ಮೇಲೆ ಕಣ್ಣಿಟ್ಟಿದ್ದ ಆತ ಎರಡನ್ನೂ ದುರ್ಬಳಕೆ ಮಾಡಿದ್ದ.

ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪಿ ಫಯಾಝ್ ಆಕೆಯಿಂದ 1.50 ಕೋಟಿ ರೂ. ನಷ್ಟು ಹಣವನ್ನು ಹಂತಹಂತವಾಗಿ ಪಡೆದಿದ್ದ‌. ಇದೀಗ ಆತ ಬೇರೊಂದು ಯುವತಿಯನ್ನು ವಿವಾಹವಾಗಲು ಅಣಿಯಾಗಿದ್ದ. ಇದು ಮಹಿಳೆಯ ಗಮನಕ್ಕೆ ಬಂದಿದೆ. ತಕ್ಷಣ ಆಕೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದೀಗ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

20/05/2022 02:09 pm

Cinque Terre

9.74 K

Cinque Terre

0

ಸಂಬಂಧಿತ ಸುದ್ದಿ