ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ದೈವಸ್ಥಾನದಲ್ಲಿ ಕಳವು ಕೇಸ್‌- ಆರೋಪಿ ಅರೆಸ್ಟ್

ಮಣಿಪಾಲ: ಹಿರೇಬೆಟ್ಟು ದೈವಸ್ಥಾನ ಕಳವು ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹಿರೇಬೆಟ್ಟು ನಿವಾಸಿ ಭಾಸ್ಕರ್ ಶೆಟ್ಟಿ (49) ಬಂಧಿತ ಆರೋಪಿಯಾಗಿದ್ದಾನೆ. 10 ದಿನಗಳ ಹಿಂದೆ ಹಿರೇಬೆಟ್ಟುವಿನ ಬಾಳಕಟ್ಟು ಬೀಡುಮನೆ ದೈವಸ್ಥಾನಕ್ಕೆ ನುಗ್ಗಿದ ಆರೋಪಿ, ಆರತಿ, ಪಂಚಲೋಹದ ಮುಖ, ಹಿತ್ತಾಳೆ ಸಾಮಾಗ್ರಿ, ಗಂಟೆ ಸೇರಿದಂತೆ ಸುಮಾರು 50 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Edited By : PublicNext Desk
Kshetra Samachara

Kshetra Samachara

20/05/2022 10:41 am

Cinque Terre

10.87 K

Cinque Terre

1

ಸಂಬಂಧಿತ ಸುದ್ದಿ