ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರೇಯಸಿಯ ಕೊಲೆಗೆ ಯತ್ನ- ಮಾಜಿ ಪ್ರಿಯಕರ ಅಂದರ್

ಮಂಗಳೂರು: ಮಾಜಿ ಪ್ರಿಯಕರನೇ ಪ್ರೇಯಸಿಯ ಕೊಲೆಗೆ ಯತ್ನಿಸಿದ್ದಾನೆಂಬ ಆರೋಪದಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸರು ಆರೋಪಿ ಪ್ರಿಯಕರನನ್ನು ದಸ್ತಗಿರಿ ಮಾಡಿದ್ದಾರೆ‌.

ಬಂಟ್ವಾಳ ತಾಲೂಕಿನ ಕಸಬ, ನಿವಾಸಿ ಶಿವರಾಜ್ ಕುಲಾಲ್(28) ಬಂಧಿತ ಆರೋಪಿ. ಹಳೆಯಂಗಡಿ ನಿವಾಸಿ ಅಶ್ವಿನಿ (30) ಎಂಬಾಕೆ ಆರೋಪಿ‌ ಶಿವರಾಜ್ ಕುಲಾಲ್ ಮೇಲೆ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ಅಶ್ವಿನಿಗೆ ಈ ಹಿಂದೆ ಬೇರೆ ವಿವಾಹವಾಗಿತ್ತು. ಆದರೆ ಪತಿಯೊಂದಿಗೆ ಮನಸ್ತಾಪ ಹೊಂದಿರುವ ಆಕೆ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಈ ನಡುವೆ ಆಕೆ ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ಶಿವರಾಜ್ ಕುಲಾಲ್ ನನ್ನು ಪ್ರೀತಿಸುತ್ತಿದ್ದರು‌.

ಆದರೆ ಆರು ತಿಂಗಳ ಹಿಂದೆ ಶಿವರಾಜ್ ಕುಲಾಲ್ ಸಂತ್ರಸ್ತೆ ಅಶ್ವಿನಿಗೆ ಮಾನಸಿಕ ಹಿಂಸೆ ನೀಡಿ, ಮಾನಭಂಗಕ್ಕೆ ಯತ್ನಿಸಿದ್ದನೆಂದು ಆಕೆ ಆರೋಪಿಯಿಂದ ದೂರವಾಗಿದ್ದರು. ಆದರೆ ಮೇ 17ರಂದು ಸಂಜೆ 6:30ರ ಸುಮಾರಿಗೆ ಬಳ್ಳಾಲ್ ಬಾಗ್‌ನಲ್ಲಿ ಸಂತ್ರಸ್ತೆ ಕೆಲಸ ಮುಗಿಸಿಕೊಂಡು ಹೊರಟಾಗ ಕೈಹಿಡಿದೆಳೆದು ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದನೆಂದು ಆರೋಪಿಸಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಶಿವರಾಜ್ ಕುಲಾಲ್ ನನ್ನು ಬಂಧಿಸಿರುವ ಪೊಲೀಸರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

18/05/2022 06:18 pm

Cinque Terre

21.9 K

Cinque Terre

1

ಸಂಬಂಧಿತ ಸುದ್ದಿ