ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೊಲೀಸ್ ಪ್ರಕರಣದಿಂದ ಹೆಸರು ತೆಗೆಯುದಾಗಿ ನಂಬಿಸಿ 2.95 ಲಕ್ಷ ರೂ. ಸುಲಿಗೆ; ಗ್ರಾಪಂ ಸದಸ್ಯನ ಬಂಧನ

ಮಂಗಳೂರು: ದರೋಡೆ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸರಿಗೆ ಬೇಕಾಗಿದ್ದಾತನ ಹೆಸರನ್ನು ಪ್ರಭಾವ ಬಳಸಿ ಪ್ರಕರಣದಿಂದ ತೆಗೆಸುವುದಾಗಿ ಹೇಳಿ‌ 2.95 ಲಕ್ಷ ರೂ. ಸುಲಿಗೆ ಮಾಡಿರುವ ಗ್ರಾಮ ಪಂಚಾಯತ್ ಸದಸ್ಯನನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ‌.

ನಗರದ ಪಾವೂರು ನಿವಾಸಿ ಅಬ್ದುಲ್ ಖಾದರ್ ರಿಝ್ವಾನ್(28) ಬಂಧಿತ ಆರೋಪಿ. 2021ರ ಡಿಸೆಂಬರ್ ನಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯು ದಸ್ತಗಿರಿಯಾಗದೇ ಉಳಿದಿದ್ದ. ಪೊಲೀಸರು ಆತನ ಹುಡುಕಾಟದಲ್ಲಿದ್ದರು. ಈ ಸಂದರ್ಭ ಆತನನ್ನು ಸಂಪರ್ಕಿಸಿದ ಇಬ್ಬರು 'ದರೋಡೆ ಪ್ರಕರಣದಲ್ಲಿರುವ ನಿನ್ನ ಹೆಸರನ್ನು ಪೊಲೀಸರಿಗೆ ಹಣ ನೀಡಿ ಪ್ರಭಾವ ಬೀರಿ ತೆಗೆಸುತ್ತೇವೆ. ಅದಕ್ಕೆ 3 ಲಕ್ಷ ರೂ. ಹಣ ನೀಡಬೇಕು' ಎಂದು ಡಿಮ್ಯಾಂಡ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆತ ಹಂತ ಹಂತವಾಗಿ ಆರೋಪಿಗಳಿಗೆ ಒಟ್ಟು 2.95 ಲಕ್ಷ ರೂ‌. ಹಣ ನೀಡಿದ್ದಾನೆ.

ಆದರೆ ಹಣ ನೀಡಿದ ಬಳಿಕವೂ ಪೊಲೀಸರು ಆತನನ್ನು ಹುಡುಕುತ್ತಿದ್ದ ವಿಚಾರ ತಿಳಿದ ಆತ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದನು. ಆ ಬಳಿಕ ತಾನು ನೀಡಿರುವ 2.95 ಲಕ್ಷ ರೂ. ಮರಳಿ ಕೇಳಿದಾಗ ಆರೋಪಿಗಳು ಮತ್ತೆ ಕರೆ ಮಾಡಿದ್ದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿ ಮತ್ತೆ 30,000 ರೂ. ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆತ ಹಣ ಪಡೆದ ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಅದರಂತೆ ಪ್ರಕರಣ ದಾಖಲು ಮಾಡಿರುವ ಪೊಲೀಸರು ಗ್ರಾಮ ಪಂಚಾಯತ್ ಸದಸ್ಯನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

14/05/2022 10:33 am

Cinque Terre

9.06 K

Cinque Terre

0

ಸಂಬಂಧಿತ ಸುದ್ದಿ