ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗ್ರಾಮಲೆಕ್ಕಿಗ ಉದ್ಯೋಗದ ಆಮಿಷವೊಡ್ಡಿ 40ಲಕ್ಷ ರೂ. ದೋಖಾ!

ಮಂಗಳೂರು: ಗ್ರಾಮ ಲೆಕ್ಕಿಗ ಉದ್ಯೋಗ ತೆಗೆಸಿಕೊಡುವುದಾಗಿ ಹಾಸನದ ವ್ಯಕ್ತಿಯೋರ್ವರಿಗೆ 40 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಾಸನ ಜಿಲ್ಲೆಯ ಆಲೂರು ನಿವಾಸಿ ಕೃಷ್ಣ ಗೌಡ(66) ವಂಚನೆಗೊಳಗಾಗಿ ದೂರು ನೀಡಿದವರು. ಇವರು ಬೆಂಗಳೂರಿನ ನಾಗಭೂಷಣ್, ಮಂಗಳೂರಿನ ವಾಮಂಜೂರು ನಿವಾಸಿ ನಾರಾಯಣ ಸ್ವಾಮಿ, ಮುಲ್ಕಿಯ ಮಹೇಶ್ ಭಟ್, ಮೂಡುಬಿದಿರೆ ನಿವಾಸಿ ದಿನೇಶ್ ಎಂಬವರು ವಂಚನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ‌.

ಕೃಷ್ಣ ಗೌಡರು ತಮ್ಮ ಪುತ್ರ ದರ್ಶನ್ ಗೆ ಗ್ರಾಮ ಲೆಕ್ಕಾಧಿಕಾರಿ ಉದ್ಯೋಗ ದೊರಕಿಸಿಕೊಡುತ್ತೇವೆಂದು ಆರೋಪಿಗಳು ಮೊದಲಿಗೆ 8 ಲಕ್ಷ ರೂ‌. ಹಾಗೂ ಆ ಬಳಿಕ 32 ಲಕ್ಷ ರೂ‌‌. ಪಡೆದುಕೊಂಡಿದ್ದರು. ಆದರೆ ಆ ಬಳಿಕ ಉದ್ಯೋಗವನ್ನು ನೀಡದೆ, ಹಣವನ್ನೂ ವಾಪಸ್ ಮಾಡದೆ ವಂಚಿಸಿದ್ದಾರೆಂದು ಅವರು ಮಂಗಳೂರು ಸೈಬರ್ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

06/05/2022 03:08 pm

Cinque Terre

20.38 K

Cinque Terre

2

ಸಂಬಂಧಿತ ಸುದ್ದಿ