ಪುತ್ತೂರು: ತನ್ನ ಸ್ವಯಾರ್ಜಿತ ಆಸ್ತಿಯನ್ನು ಮಾರಾಟ ಮಾಡಲು ಮಗ ಅಡ್ಡಿಯಾಗುತ್ತಿದ್ದು, ತನಗೆ ನ್ಯಾಯ ಒದಗಿಸಬೇಕೆಂದು ವೃದ್ಧರೋರ್ವರು ಸರಕಾರದ ಮೊರೆ ಹೋಗಿದ್ದಾರೆ.
ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಗುರಿಕಲ್ಲು ನಿವಾಸಿಯಾದ 85 ವರ್ಷ ಪ್ರಾಯದ ವೆಂಕಟರಮಣ ಭಟ್ ತನಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿ ಸರಕಾರಕ್ಕೆ ಮೊರೆ ಹೋದ ವೃದ್ಧರಾಗಿದ್ದು, ತನಗೆ ನ್ಯಾಯ ಒದಗಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ನನ್ನ ಹೆಸರಿನಲ್ಲಿ ಸುಮಾರು ಐದು ಎಕರೆ ಭೂಮಿಯಿದ್ದು, ಇತ್ತೀಚೆಗೆ ಪತ್ನಿಯೂ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ನನಗೆ ನಾಲ್ಕು ಜನ ಮಕ್ಕಳಿದ್ದು, ಇದರಲ್ಲಿ ಮೂವರು ಹೆಣ್ಣು ಮತ್ತು ಓರ್ವ ಗಂಡು ಮಗನಿದ್ದಾನೆ.
ಹೆಣ್ಣು ಮಕ್ಕಳು ಮದುವೆಯಾಗಿ ಅವರವರ ಮನೆಯ ಜವಾಬ್ದಾರಿಯಲ್ಲಿದ್ದಾರೆ. ಆದರೆ ಮನೆಯಲ್ಲಿರುವ ಮಗ ನನಗೆ ಯಾವುದೇ ಸಹಾಯ ಮಾಡುತ್ತಿಲ್ಲ. 85 ವರ್ಷ ಪ್ರಾಯದ ತನಗೆ ಆಹಾರಕ್ಕೂ ತೊಂದರೆಯಾಗಿದೆ. ಭೂಮಿಯನ್ನು ಮಾರಾಟ ಮಾಡಿ ಮಗಳ ಮನೆಗೆ ಹೋಗುವ ನಿರ್ಧಾರ ಮಾಡಿದ್ದರೂ, ಭೂಮಿಯನ್ನು ಮಾರಾಟ ಮಾಡಲೂ ಮಗ ಬಿಡುತ್ತಿಲ್ಲ.
ಈ ಸಂಬಂಧ ನ್ಯಾಯ ಒದಗಿಸಬೇಕೆಂದು ಪುತ್ತೂರು ಸಹಾಯಕ ಆಯುಕ್ತರ ಕಚೇರಿಗೆ ಮನವಿ ಮಾಡಿದ್ದೇನೆ. ಆದರೆ ಕಚೇರಿಯಿಂದ ದೂರಿಗೆ ಸಂಬಂಧಪಡದ ಉತ್ತರವನ್ನು ಇಲಾಖೆ ನೀಡಿದೆ ಎಂದು ಆರೋಪಿಸಿದ ಅವರು, ಸಹಾಯಕ ಆಯುಕ್ತರ ತೀರ್ಪನ್ನು ಪ್ರಶ್ನಿಸಿ ಇದೀಗ ವೆಂಕಟರಮಣ ಭಟ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.
Kshetra Samachara
02/05/2022 02:51 pm