ಮುಲ್ಕಿ: ಮುಲ್ಕಿ ಸಮೀಪದ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಗೆ ಅಭಿನಂದನೆ ಸಲ್ಲಿಸಿ ಹಾಕಲಾಗಿದ್ದ ಬ್ಯಾನರನ್ನು ಹರಿದುಹಾಕಿದ್ದ ದುಷ್ಕರ್ಮಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಭಜನಾಮಂದಿರದ ಸನ್ನಿಧಿಯಲ್ಲಿ ಪ್ರಾರ್ಥನೆ ನಡೆಸಿದ್ದಾರೆ.
ಕಳೆದ ದಿನಗಳ ಹಿಂದೆ ಧಾರ್ಮಿಕದತ್ತಿ ಇಲಾಖೆಯಿಂದ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರಕ್ಕೆ ಶಾಸಕರ ಅನುದಾನದಲ್ಲಿ ಸುಮಾರು 5 ಲಕ್ಷ ಮಂಜೂರು ಮಾಡಿದ್ದು ಈ ಬಗ್ಗೆ ಕೆರೆಕಾಡು ಸುಖಾನಂದ ಶೆಟ್ಟಿ ವೃತ್ತದ ಬಳಿ ಅಳವಡಿಸಲಾಗಿತ್ತು.ಅದನ್ನು ಯಾರೋ ದುಷ್ಕರ್ಮಿಗಳು ಎ 27 ರಾತ್ರಿ ಹರಿದು ಹಾಕಿದ್ದು ಈ ಬಗ್ಗೆ ಮುಲ್ಕಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೂಡಲೇ ಮುಲ್ಕಿ ಪೊಲೀಸರು ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
02/05/2022 09:25 am