ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಬಿರಿಯಾನಿ ಆರ್ಡರ್ ತಡವಾಗಿದ್ದಕ್ಕೆ ಹೊಟೇಲು‌ ಮಾಲೀಕನಿಗೇ ಥಳಿಸಿದ!

ಮಣಿಪಾಲ: ಆರ್ಡರ್ ಮಾಡಿದ ಬಿರಿಯಾನಿ ತಡವಾಗಿ ಕೊಟ್ಟರು ಎಂಬ ಕಾರಣಕ್ಕೆ ಭೂಪನೊಬ್ಬ ಹೊಟೇಲು ಮಾಲೀಕನಿಗೇ ಸ್ಯಾನಿಟೈಸರ್ ಸ್ಟ್ಯಾಂಡ್‌ನಿಂದ ಹಲ್ಲೆ ನಡೆಸಿರುವ ಘಟನೆ ಮಣಿಪಾಲದಲ್ಲಿ ರಾತ್ರಿ ನಡೆದಿದೆ.

ಮಣಿಪಾಲದ ಡಿಷಸ್ ಹೊಟೇಲಿನಲ್ಲಿ ರಾತ್ರಿ ಹನ್ನೊಂದು ಘಂಟೆಗೆ ಪಡುಕೆರೆಯ ನಂದನ್ ಎನ್ನುವಾತ ಬಿರಿಯಾನಿ ಅರ್ಡರ್ ಮಾಡಿದ್ದ. ಬಿರಿಯಾನಿ ನೀಡಲು ತಡವಾಗಿದ್ದಕ್ಕೆ ಏಕಾ ಏಕಿ ಏರುದನಿಯಲ್ಲಿ ಯಾಕೆ ಲೇಟು ಅನ್ನುತ್ತಾ ಗಲಾಟೆ ಶುರು ಮಾಡಿದಾಗ ಗ್ರಾಹಕನನ್ನು ಹೊಟೇಲ್ ಮಾಲೀಕ ಸಮಾಧಾನಪಡಿಸಿದ್ದಾರೆ. ಇಷ್ಟಕ್ಕೆ ಸಮಾಧಾನಗೊಳ್ಳದ ಗ್ರಾಹಕ ನಂದನ್ ಎಂಬಾತ ಅಲ್ಲಿದ್ದ ಸ್ಯಾನಿಟೈಸರ್ ಸ್ಟ್ಯಾಂಡ್ ಹಿಡಿದು ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಹೇಳುತ್ತಾ ಹಲ್ಲೆ ಮಾಡಿದ್ದಾನೆ.ಇದರಿಂದಾಗಿ ಹೊಟೇಲ್ ಮಾಲೀಕನ ಎಡಗೈಗೆ ಗಾಯವಾಗಿದೆ. ತಡೆಯಲು ಹೋದ ಕೆಲಸಗಾರನ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿರುವ ನಂದನ್ ಪಡುಕೆರೆ ಎನ್ನುವ ಗ್ರಾಹಕನ ವಿರುದ್ದ ಹೊಟೇಲ್ ಮಾಲೀಕ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Edited By : Nagaraj Tulugeri
PublicNext

PublicNext

20/04/2022 03:36 pm

Cinque Terre

22.16 K

Cinque Terre

0

ಸಂಬಂಧಿತ ಸುದ್ದಿ