ಉಡುಪಿ: ಉಡುಪಿಯಲ್ಲಿ ಕಾಮುಕನೊಬ್ಬ ಹಾಡಹಗಲೇ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಘಟನೆ ನಗರದ ಪುರಭವನ ಬಳಿ ನಡೆದಿದೆ.
ಕಾಲೇಜು ಬಿಟ್ಟು ಬಸ್‌ಗಾಗಿ ಕಾಯುತ್ತಿದ್ದ ಯುವತಿಯ ಮೇಲೆ ಕಾಮುಕ ಏಕಾಏಕಿ ಮುಗಿಬಿದ್ದಿದ್ದಾನೆ. ತಕ್ಷಣ ಬೆಚ್ಚಿದ ವಿದ್ಯಾರ್ಥಿನಿ ರಕ್ಷಣೆಗಾಗಿ ಬೊಬ್ಬೆ ಹೊಡೆದಿದ್ದಾಳೆ. ಈ ವೇಳೆ ಪಕ್ಕದಲ್ಲಿದ್ದ ಸಾರ್ವಜನಿಕರು ಸಹಾಯಕ್ಕೆ ಧಾವಿಸಿದ್ದಾರೆ. ಮಾತ್ರವಲ್ಲ, ಕಾಮುಕನಿಗೆ ಬಿಸಿಬಿಸಿ ಕಜ್ಜಾಯ ಕೊಟ್ಟಿದ್ದಾರೆ. ಬಳಿಕ ಕಾಮುಕನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ನೀಲ್ ಗಾಮಾ ಎಂಬ ಯುವಕನಿಂದ ಈ ದುಷ್ಕೃತ್ಯ ನಡೆದಿದ್ದು, ಈತನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.
PublicNext
19/04/2022 06:34 pm