ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಕಾಲ್ ರಿಸೀವ್ ಮಾಡದ ಪ್ರಿಯತಮ; ಹೋಮ್ ನರ್ಸ್ ಆತ್ಮಹತ್ಯೆಗೆ ಶರಣು!

ಹೆಬ್ರಿ: ತಾನು ಪ್ರೀತಿಸುತ್ತಿದ್ದ ಪ್ರಿಯತಮ ಫೋನ್ ಕರೆ ಸ್ವೀಕರಿಸಲಿಲ್ಲ ಎಂದು ಮನನೊಂದ ಹೋಮ್ ನರ್ಸ್ ಯುವತಿ ಮನನೊಂದು ಇಲಿ ಪಾಷಣ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೆಬ್ರಿ ಸಂತಕಟ್ಟೆಯಲ್ಲಿ ಸಂಭವಿಸಿದೆ. ಕುಸುಮಾ (19) ಅತ್ಮಹತ್ಯೆ ಮಾಡಿಕೊಂಡಿರುವ ಯುವತಿ.

ಈಕೆ ಸಂತಕಟ್ಟೆ ಕಳತ್ತೂರಿನ ಮನೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹೋಂನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಚಿಕ್ಕ ಮಗಳೂರು ಮೂಲದವಳಾದ ಈಕೆ ಅದೇ ಜಿಲ್ಲೆಯ ರಾಹುಲ್ ಎನ್ನುವನನ್ನು ಪ್ರೀತಿಸುತ್ತಿದ್ದಳು.ಈಕೆ ಪದೇ ಪದೇ ಕರೆ ಮಾಡಿದರೂ ಅತ ಕಾಲ್ ರಿಸೀವ್ ಮಾಡಿರಲಿಲ್ಲ.ಇದರಿಂದ ಮನನೊಂದ ಯುವತಿ ಮನೆಯಲ್ಲಿದ್ದ ಇಲಿ ಪಾಷಣವನ್ನು ಹಾಲಿನಲ್ಲಿ ಬೆರೆಸಿ ಕುಡಿದಿದ್ದಳು.ಅಸ್ವಸ್ಥಗೊಂಡ ಈಕೆಯನ್ನು ತಕ್ಷಣ ಅಸ್ಪತ್ರೆಗೆ ಸೇರಿಸಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಅಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ಹೆಬ್ರಿ ಠಾಣೆಯಲ್ಲಿ ಈ ಸಂಬಂಧ ಕೇಸು ದಾಖಲಾಗಿದೆ.

Edited By : Nagaraj Tulugeri
PublicNext

PublicNext

19/04/2022 01:15 pm

Cinque Terre

30.22 K

Cinque Terre

2

ಸಂಬಂಧಿತ ಸುದ್ದಿ