ಮಂಗಳೂರು: ಕೊಣಾಜೆ ಠಾಣೆಯ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಗೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಹಲ್ಲೆಗೈದಿರುವ ಆರೋಪಿಯನ್ನು ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಆರೋಪಿ ಸಿದ್ದೀಕ್ (23) ನನ್ನು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಬಂಧಿಸಿ ನಗರಕ್ಕೆ ಕರೆ ತರಲಾಗಿತ್ತು. ಈ ಸಂದರ್ಭ ಕೊಣಾಜೆ ಪೊಲೀಸ್ ಇನ್ ಸ್ಪೆಕ್ಟರ್ ಶರಣಪ್ಪರಿಗೆ ಹಲ್ಲೆಗೈದು ಆರೋಪಿ ಪರಾರಿಯಾಗಿದ್ದ. ಇದೀಗ ಆತನನ್ನು ಕೊಣಾಜೆ ಸಮೀಪದ ಪಜೀರು ಎಂಬಲ್ಲಿ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ಫೆ.21ರಂದು ಆರೋಪಿ ಸಿದ್ದೀಕ್ ಹಾಗೂ ಆತನ ಸಹೋದರ ನಾಸೀರ್ ದುಬಾರಿ ವಾಚ್ ಒಂದನ್ನು ಮಳಿಗೆಯೊಂದಕ್ಕೆ ಮಾರಾಟ ಮಾಡಲೆಂದು ಆಗಮಿಸಿದ್ದರು. ಈ ಬಗ್ಗೆ ಅನುಮಾನಗೊಂಡ ಮಳಿಗೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂದರ್ಭ ಅಲ್ಲಿಗೆ ಹೋಗಿದ್ದ ಮಂಗಳೂರು ಉತ್ತರ ಠಾಣಾ ಹೆಡ್ ಕಾನ್ ಸ್ಟೇಬಲ್ ವಿನೋದ್ ಹಾಗೂ ಕಾನ್ ಸ್ಟೇಬಲ್ ಪ್ರವೀಣ್ ವಿಚಾರಣೆ ನಡೆಸಿದ್ದಾರೆ. ಆಗ ಇಬ್ಬರೂ ಸರಿಯಾಗಿ ಉತ್ತರ ನೀಡದೆ ಹೆಡ್ ಕಾನ್ ಸ್ಟೇಬಲ್ ವಿನೋದ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ನಾಸಿರ್ ನನ್ನು ವಿಟ್ಲದಲ್ಲಿ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Kshetra Samachara
17/04/2022 02:21 pm