ಬೈಂದೂರು : ಬೈಂದೂರು ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಅರೆಹೊಳೆ ಮುಖ್ಯದ್ವಾರದ ಹತ್ತಿರ ಬಿಎಎಂಎಸ್ ವೈದ್ಯ ಅಲೋಪತಿ ಔಷದ ನೀಡುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಪತ್ರಕರ್ತರು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಅಲೋಪತಿ ಮೆಡಿಸನ್ ನೀಡುತ್ತಿರುವ Dr ಪ್ರಜಿತ್ ನಂಬಿಯರ್ ನನ್ನು ಪತ್ತೆ ಹಚ್ಚಿದ್ದಾರೆ.
ಮೂಲತಃ ನಂಬಿಯರ್ ಮನೆತನದವರು ಆಯುರ್ವೇದ ವೈದ್ಯರಾಗಿದ್ದು ಈ ಮೊದಲು ಏರುಕೋಣೆಯಲ್ಲಿ ಕ್ಲಿನಿಕ್ ಇಟ್ಟು ಕೊಂಡಿದ್ದರು. ಇತ್ತಿಚೆಗೆ ಅರೆಹೊಳೆ ಕ್ರಾಸ್ ಬಳಿ ಕ್ಲಿನಿಕ್ ಹೊಂದಿದ್ದರು.
ಹೌದು ಇತ್ತೀಚಿಗಷ್ಟೇ ನಾಡ ಗುಡ್ಡೆಯಂಗಡಿ ಅಲ್ಲಿ ಆಯುರ್ವೇದ ವೈದ್ಯರ ಮೇಲೆ ADC ನಾಗರಾಜ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಮಾಹಿತಿ ತಿಳಿದ ತಕ್ಷಣ ಅದೇ ದಿನ ರಾತ್ರಿ ವೇಳೆ Dr.ಪ್ರಜೆತ್ ಎನ್ನುವರು ತಮ್ಮಲ್ಲಿರುವ ಇಂಗ್ಲಿಷ್ ಮೆಡಿಸಿನ್ ಶಿಫ್ಟ್ ಮಾಡಿದ್ದರು.
ಏ.13 ರ ಬೆಳಿಗ್ಗೆ ಪತ್ರಿಕಾ ಬಳಗದವರು ಭೇಟಿ ನೀಡಿದ್ದಾಗ ಇಂಗ್ಲಿಷ್ ಮೆಡಿಸಿನ್ ಇದ್ದದು ಕಂಡು ಬಂದ್ದಿದೆ. ಈ ವೇಳೆ ಜಿಲ್ಲಾ ಆರೋಗ್ಯ ಅಧಿಕಾರಿ DHO ಹಾಗೂ THO ಆರೋಗ್ಯ ಇಲಾಖೆಗೆ ಸಂಬಂದ ಪಟ್ಟ ಅಧಿಕಾರಿಗಳಿಗೂ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು ಯಾವ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಿಲ್ಲ.
ಇದನ್ನು ಮನಗಂಡ ಪತ್ರಕರ್ತರು ವ್ಯದ್ಯರನ್ನು ಭೇಟಿ ಮಾಡಿ ಕ್ಲಿನಿಕನಲ್ಲಿ ಸ್ಟ್ರಿಂಗ್ ಮಾಡಿದಾಗ ಬಹಳಷ್ಟು ಇಂಗ್ಲಿಷ್ ಮೆಡಿಸಿನ ಪತ್ತೆಯಾಗಿದೆ.
ಸದ್ಯ ಈ ವೈದ್ಯರ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
-ದಾಮೋದರ ಮಗವೀರ ನಾಯಕವಾಡಿ ಪಬ್ಲಿಕ್ ನೆಕ್ಸ್ಟ್
Kshetra Samachara
14/04/2022 09:47 am