ಉಡುಪಿ: ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಮೃತದೇಹದ ಮರಣೋತ್ತರ ಪರೀಕ್ಷೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಪೂರ್ಣಗೊಂಡಿದೆ.
ಸುಮಾರು ಎರಡು ಗಂಟೆಗಳ ಕಾಲ ಕೆಎಂಸಿ ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿತು.ಇದೇ ವೇಳೆ ಫೋರೆನ್ಸಿಕ್ ಮೆಡಿಸಿನ್ ವಿಭಾಗಕ್ಕೆ ಎಸ್ಪಿ ವಿಷ್ಣುವರ್ಧನ್ ಭೇಟಿ ಕೊಟ್ಟಿದ್ದಾರೆ.ಹಿರಿಯ ಪೊಲಿಸ್ ಅಧಿಕಾರಿಗಳು ಮೊಕ್ಕಾಂಹೂಡಿದ್ದಾರೆ.
ಕುಟುಂಬಸ್ಥರ ಜೊತೆ ಎಸ್ಪಿ ವಿಷ್ಣುವರ್ಧನ್ ಮಾತುಕತೆ ನಡೆಸುತ್ತಿದ್ದು,ರಾತ್ರಿ ಕುಟುಂಬಸ್ಥರು ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗುವ ನಿರೀಕ್ಷೆ ಇದೆ.
Kshetra Samachara
13/04/2022 08:55 pm