ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಈಶ್ವರಪ್ಪ ಸೇರಿ ಮೂವರನ್ನು ಬಂಧಿಸದೆ ಶವ ಪಡೆಯುವುದಿಲ್ಲ; ಕುಟುಂಬಸ್ಥರ ಹೇಳಿಕೆ

ಉಡುಪಿ: ತಮ್ಮನ ಆತ್ಮಹತ್ಯೆ ಪ್ರಕರಣದಲ್ಲಿ 3 ಆರೋಪಿಗಳ ಬಂಧನ ಆಗುವವರೆಗೂ ಲಾಡ್ಜ್‌ನಿಂದ ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಸಂತೋಷ್ ಪಾಟೀಲ ಸಹೋದರ ಪ್ರಶಾಂತ್ ಪಾಟೀಲ್ ಪಟ್ಟು ಹಿಡಿದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನಿಖೆ ವಿಚಾರದಲ್ಲಿ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ. ಈಗಾಗಲೇ ಸಂಬಂಧಪಟ್ಟ ದಾಖಲೆಗಳನ್ನು ನಾವು ಒದಗಿಸಿದ್ದೇವೆ. ಸಚಿವ ಕೆ.ಎಸ್. ಈಶ್ವರಪ್ಪ, ಸಚಿವರ ಆಪ್ತರಾದ ಬಸವರಾಜ ಹಾಗೂ ರಮೇಶ್‌ರನ್ನು ಬಂಧಿಸಿದ ನಂತರವೇ ನಾವು ಮುಂದಿನ ಪ್ರಕ್ರಿಯೆ ಮಾಡಲು ಬಿಡುತ್ತೇವೆ. ಅಲ್ಲಿಯವರೆಗೂ ಶಾಂಭವಿ ಲಾಡ್ಜ್‌ನಿಂದ ಸಂತೋಷ್ ಮೃತದೇಹವನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

13/04/2022 01:26 pm

Cinque Terre

35.36 K

Cinque Terre

10

ಸಂಬಂಧಿತ ಸುದ್ದಿ