ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಯುವತಿಯ ವಿಚಾರದಲ್ಲಿ ತಗಾದೆ, ಸ್ನೇಹಿತರಿಂದಲೇ ಯುವಕನಿಗೆ ಚೂರಿ ಇರಿತ

ಉಳ್ಳಾಲ: ಯುವತಿಯ ವಿಚಾರದಲ್ಲಿ ತಗಾದೆ ಶುರುವಾಗಿ ನಾಲ್ವರ ತಂಡವು ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿಯ ಮಸೀದಿ ಬಳಿ ನಿನ್ನೆ ತಡರಾತ್ರಿ ನಡೆದಿದೆ.

ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಅಲ್-ಸಾದೀನ್ (24)ಚೂರಿ ಇರಿತಕ್ಕೊಳಗಾದ ಯುವಕ. ಅಲ್-ಸಾದೀನ್ ರಾತ್ರಿ ಮಸೀದಿಯಿಂದ ಬರುತ್ತಿದ್ದ ವೇಳೆ ನಾಲ್ವರ ತಂಡ ಆತನ ಬೆನ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ವಿಫಲ ಯತ್ನ ನಡೆಸಿದ್ದು, ತಕ್ಷಣ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾದೀನ್‌ನ ಸ್ನೇಹಿತರಾಗಿದ್ದ ಅಪ್ಪಿ ಹಾಗೂ ಇತರ ಮೂವರು ಸೇರಿ ಇರಿದಿದ್ದಾರೆ. ಯುವತಿಯ ವಿಚಾರ ಮುಂದಿಟ್ಟು ಗಲಾಟೆ ನಡೆಸಿ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ. ಇರಿತಕ್ಕೊಳಗಾದ ಅಲ್ ಸಾದೀನ್ ವಿರುದ್ಧವೂ ಉಳ್ಳಾಲ ಠಾಣೆಯಲ್ಲಿ ಹಲವು ಪ್ರಕರಣಗಳಿವೆಯಂತೆ.

ಘಟನೆ ಬಳಿಕ ದೇರಳಕಟ್ಟೆ ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಶಶಿ ಕುಮಾರ್, ಎಸಿಪಿ ದಿನಕರ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದ ತಂಡ ಭೇಟಿ ನೀಡಿದ್ದು ತನಿಖೆ ಆರಂಭಿಸಿದೆ.

Edited By : Vijay Kumar
Kshetra Samachara

Kshetra Samachara

13/04/2022 11:08 am

Cinque Terre

6.3 K

Cinque Terre

0

ಸಂಬಂಧಿತ ಸುದ್ದಿ