ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು :ಓಲಾ ಕ್ಯಾಬ್ ಚಾಲಕನಿಂದ ಪ್ರಯಾಣಿಕನಿಗೆ ಹಲ್ಲೆ

ಬಜಪೆ: ಓಲಾ ಕ್ಯಾಬ್ ಚಾಲಕನೋರ್ವ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಇಂದು ನಡೆದಿದೆ.

ರಾತ್ರಿ 8:30ರ ಸುಮಾರಿಗೆ ಬೆಂಗಳೂರಿನಿಂದ ಆಗಮಿಸಿದ್ದ ಉಳ್ಳಾಲದ ಎಂ.ಆರ್.ನೌಫಾಲ್ ಎಂಬವರು ಉಳ್ಳಾಲಕ್ಕೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು.

ಓಲಾ ಕ್ಯಾಬ್ ನ ಪ್ರಯಾಣ ದರ ಹೆಚ್ಚಾಯಿತು ಎಂದು ಹೇಳಿ ನೌಫಾಲ್ ಅವರು ಏರ್ ಪೋರ್ಟ್ ಟ್ಯಾಕ್ಸಿ ಬುಕ್ ಮಾಡಲು ಮುಂದಾಗುತ್ತಿದ್ದಾಗ ಕೋಪಗೊಂಡ ಓಲಾ ಕ್ಯಾಬ್ ಚಾಲಕ ಫಜಲುದ್ದೀನ್ ಏಕಾಏಕಿ ಹೊಡೆದು ಹಲ್ಲೆ ನಡೆಸಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಿಚಾರಣೆಯ ಬಳಿಕ ನೌಫಲ್ ಹಾಗೂ ಫಜಲುದ್ದೀನ್ ರಂಜಾನ್ ಹಿನ್ನಲೆಯಲ್ಲಿ ರಾಜಿ ಸಂಧಾನ ಮಾಡಿಕೊಂಡರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಎಂ ಅರ್ ನೌಫಾಲ್ ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಮಾಲಿಕರಾಗಿದ್ದರು. ಇಬ್ಬರೂ ಹಲ್ಲೆ ನಡೆಸಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By :
PublicNext

PublicNext

06/04/2022 11:10 pm

Cinque Terre

60.77 K

Cinque Terre

2

ಸಂಬಂಧಿತ ಸುದ್ದಿ