ಉಡುಪಿ: ಟೈಮಿಂಗ್ ವಿಷಯದಲ್ಲಿ ಪ್ರತಿನಿತ್ಯ ಜಗಳ ಮಾಡುವ ಖಾಸಗಿ ಬಸ್ ನಿರ್ವಾಹಕರು ಒಂದು ಹೆಜ್ಜೆ ಮುಂದೆ ಹೋಗಿ ನಡುರಸ್ತೆಯಲ್ಲೇ ಫೈಟಿಂಗ್ ಮಾಡಿಕೊಂಡ ದೃಶ್ಯವೊಂದು ಭಾರೀ ವೈರಲ್ ಆಗುತ್ತಿದೆ. ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ನಿರ್ವಾಹಕರಿಬ್ಬರು ಪೈಲ್ವಾನರಂತೆ ಬೀದಿ ಕಾಳಗ ನಡೆಸಿದ್ದಾರೆ. ಟೈಮಿಂಗ್ಸ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಇವರಿಬ್ಬರು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ.
ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್‌ಗಳ ಕಂಡಕ್ಟರ್‌ಗಳು ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಡಿಕೊಂಡಿದ್ದು ಕೆಲ ಕಾಲ ನೆರೆದ ಜನರಿಗೆ ಮನರಂಜನೆ ನೀಡಿದ್ದು ಮಾತ್ರವಲ್ಲ , ಆಕ್ರೋಶಕ್ಕೂ ಕಾರಣವಾಗಿದೆ. ಈ ಬೀದಿ ಜಗಳದ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
PublicNext
06/04/2022 09:15 am