ಮುಲ್ಕಿ: ಮುಲ್ಕಿಯ ಇತಿಹಾಸ ಪ್ರಸಿದ್ಧ ಒಂಬತ್ತು ಮಾಗಣೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೆಸರನ್ನು ಗೂಗಲ್ ನಲ್ಲಿ ದುಷ್ಕರ್ಮಿಗಳು "ಹಝರತ್ ಬಪ್ಪಬ್ಯಾರಿ ದುರ್ಗಾಪರಮೇಶ್ವರಿ" ಎಂದು ಬದಲಾಯಿಸಿದ್ದು ಭಕ್ತಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.
ಗೂಗಲ್ ಮ್ಯಾಪ್ ನಲ್ಲಿ ಸಾಮಾನ್ಯ ಜನರಿಗೆ ಮೊಬೈಲ್ನಲ್ಲಿ ತಿದ್ದುಪಡಿಗೆ ಅವಕಾಶವಿಲ್ಲದಿದ್ದರೂ ದುಷ್ಕರ್ಮಿಗಳು ಚಾಲಾಕಿತನ ತೋರಿಸಿ ಸಾಮರಸ್ಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೆಸರನ್ನು ಬದಲಾಯಿಸಿದ್ದಾರೆ ಎಂದು ಭಕ್ತಾಭಿಮಾನಿಗಳು ಆರೋಪಿಸಿದ್ದಾರೆ.
ದೇವಸ್ಥಾನದ ಹೆಸರನ್ನು ಗೂಗಲ್ ಮ್ಯಾಪ್ ನಲ್ಲಿ ಬದಲಾಯಿಸಿದ ಬಗ್ಗೆ ದೇವಸ್ಥಾನದ ಆಡಳಿತ ಸಿಬ್ಬಂದಿಗಳ ಗಮನಕ್ಕೆ ಬಂದಿದ್ದು ಆಡಳಿತ ಮಂಡಳಿ ಮುಲ್ಕಿ ಪೊಲೀಸ್ ಠಾಣೆಗೆ, ಸೈಬರ್ ಕ್ರೈಂ ಹಾಗೂ ಕಮಿಷನರ್ ಗೆ ದೂರು ನೀಡಿದ್ದಾರೆ.
ಕಳೆದ ದಿನಗಳ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಿರಾಕರಣೆ ಬಗ್ಗೆ ವಿವಾದ ಉಂಟಾಗಿರುವ ಬೆನ್ನಲ್ಲಿ ಈ ಘಟನೆ ನಡೆದಿದೆ.
Kshetra Samachara
03/04/2022 02:39 pm