ಮುಲ್ಕಿ; ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಕೆಮ್ರಾಲ್ ಕಾಪಿಕಾಡು ನಿವಾಸಿ ಅಶೋಕ (45) ಎಂಬವರು ಕಳೆದ ಡಿಸೆಂಬರ್ ತಿಂಗಳಲ್ಲಿ ಏಕಾಏಕಿ ನಾಪತ್ತೆಯಾಗಿದ್ದು ಅವರ ಶವ ಅತ್ತೂರು ಅರಿಂಜ ಗುಡ್ಡೆ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ.
ಗುರುವಾರ ಸ್ಥಳೀಯರಾದ ನವೀನ ಎಂಬವರು ಕಟ್ಟಿಗೆ ತರಲು ಅತ್ತೂರು ಅರಿಂಜ ಗುಡ್ಡೆಗೆ ತೆರಳಿದ್ದು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು ಕಂಡು ಗಾಬರಿಯಿಂದ ಕೂಡಲೇ ಮುಲ್ಕಿ ಠಾಣೆಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಮೃತವ್ಯಕ್ತಿಯ ಚಹರೆ ಗುರುತು ಹಿಡಿದು ಕೆಮ್ರಾಲ್ ಕಾಪಿಕಾಡು ನಿವಾಸಿ ಅಶೋಕ್ ಎಂದು ತಿಳಿದುಬಂದಿದೆ. ಅಶೋಕ್ ಮದ್ಯವ್ಯಸನಿಯಾಗಿದ್ದು, ಈ ನಡುವೆ ಆರೋಗ್ಯ ಕೂಡ ಹದಗೆಡುತ್ತಿದ್ದು, ಮಧ್ಯದಿಂದ ಮುಕ್ತಗೊಳಿಸಲು ಪ್ರಜ್ಞ ಕೌನ್ಸಲ್ಲಿಂಗ್ ನಡೆಸಿದ್ದರೂ ಫಲಕಾರಿಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಮುಲ್ಕಿ ಪೊಲೀಸರು, ಪಂಚಾಯತ್ ಸದಸ್ಯ ಮಯ್ಯದ್ದಿ, ನವೀನ್ ಸಾಲ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Kshetra Samachara
01/04/2022 09:39 pm