ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡ್: ಬೀಗ ಮುರಿದು ಅಂಗಡಿ ಕಳ್ಳತನಕ್ಕೆ ಯತ್ನ: ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ

ಮುಲ್ಕಿ; ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಮೊಬೈಲ್ ಅಂಗಡಿ ಹಾಗೂ ಸಮೀಪದ ಗೂಡಂಗಡಿಯಲ್ಲಿ ಕಳವಿಗೆ ವಿಫಲ ಯತ್ನ ನಡೆದಿದೆ.

ಹೌದು ಶನಿವಾರ ಮುಂಜಾನೆ 3:00 ಗಂಟೆ ಸುಮಾರಿಗೆ ಕಾರ್ನಾಡು ಖಾನ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಇಮ್ರಾನ್ ಮಾಲೀಕತ್ವದ ಮೊಬಿಕಾಮ್ ಮೊಬೈಲ್ ಅಂಗಡಿಯ ಎದುರು ಭಾಗದ ಶೆಟರಿನ ಬೀಗವನ್ನು ಭಾರವಾದ ಸಾಧನದಿಂದ ಮುರಿದಿದ್ದಾರೆ. ಆದರೆ ಅಂಗಡಿಯ ಶೆಟರಲ್ಲಿ ಸೆಂಟರ್ ಲಾಕ್ ಇದ್ದ ಕಾರಣ ಕಳ್ಳತನ ನಡೆಸಲು ಸಾಧ್ಯವಾಗಿಲ್ಲ. ಬಳಿಕ ಕಳ್ಳನು ಸಮೀಪದಲ್ಲಿರುವ ಸುಧಾಕರ್ ಪೂಜಾರಿ ಎಂಬುವರ ಗೂಡಂಗಡಿಯ ಬೀಗ ಮುರಿಯಲು ಯತ್ನಿಸಿ ವಿಫಲನಾಗಿ ಪರಾರಿಯಾಗಿದ್ದಾನೆ. ಕಳ್ಳತನಕ್ಕೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಜನನಿಬಿಡ ಪ್ರದೇಶದ ಕಾರ್ನಾಡು ಪೇಟೆಯಲ್ಲಿ ಈ ಕೃತ್ಯ ನಡೆದಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.

Edited By :
Kshetra Samachara

Kshetra Samachara

26/03/2022 06:32 pm

Cinque Terre

7.99 K

Cinque Terre

0

ಸಂಬಂಧಿತ ಸುದ್ದಿ