ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಕಲ್ಲಾಪು ರೈಲ್ವೆ ಗೇಟ್ ಬಳಿ ವ್ಯಕ್ತಿಯೋರ್ವ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮೃತ ಯುವಕನನ್ನು ಪಕ್ಷಿಕೆರೆ ಪಂಜ ಕೊಯಿಕುಡೆ ನಿವಾಸಿ ದಿನೇಶ್ (43) ಎಂದು ಗುರುತಿಸಲಾಗಿದೆ. ಮೃತ ದಿನೇಶ್ ಹಳೆಯಂಗಡಿ ಲೈಟ್ ಹೌಸ್ ಬಳಿ ಸೆಲೂನ್ ನಡೆಸುತ್ತಿದ್ದು ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಮಾನಸಿಕವಾಗಿ ನೊಂದು ಶುಕ್ರವಾರ ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ಪಡುಪಣಂಬೂರು ಕಲ್ಲಾಪು ರೈಲ್ವೆ ಗೇಟ್ ಬಳಿಯ ಸುಮಾರು 300 ಮೀಟರ್ ದೂರದಲ್ಲಿ ಪಡುಬಿದ್ರೆ ಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಬಗ್ಗೆ ರೈಲಿನ ಚಾಲಕ ಕೂಡಲೇ ತಿಳಿಸಿದ್ದು ಸ್ಥಳಕ್ಕೆ ಧಾವಿಸಿದ ಮುಲ್ಕಿ ಪೊಲೀಸರು ಹಾಗೂ ಕಾರ್ನಾಡಿನ ಆಪದ್ಬಾಂಧವ ಆಸಿಫ್ ಶವ ತೆರವುಗೊಳಿಸಲು ಶ್ರಮಿಸಿದ್ದಾರೆ. ಭಾಸ್ಕರ್ ನೀಡಿದ ದೂರಿನಂತೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
26/03/2022 10:50 am