ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರೆ: ಚಿಕನ್ ಸೆಂಟರ್‌ನಲ್ಲಿ ವಿದ್ಯುತ್ ಅವಘಡ: ಕಾರ್ಮಿಕ ಸಾವು

ಪಡುಬಿದ್ರಿ: ಇಲ್ಲಿನ ಬೆರಂದಿಕೆರೆ ಸಮೀಪದ ಗಿರಿ ಚಿಕನ್ ಸೆಂಟರ್‌ನಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಅಲ್ಲಿನ ಕಾರ್ಮಿಕ ಪಡುಬಿದ್ರಿ ಕಂಚಿನಡ್ಕ ನಿವಾಸಿ ಬಶೀರ್ (47) ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಅವರು ಕೋಳಿಯನ್ನು ಕ್ಲೀನ್ ಮಾಡಲು ಯಂತ್ರದೊಳಕ್ಕೆ ಹಾಕುವ ವೇಳೆ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ಸಂಭವಿಸಿದೆ. ಇನ್ನೋರ್ವ ಕಾರ್ಮಿಕ ಮಹಮ್ಮದ್ ಖುರ್ಷಿದ್ (25) ವಿದ್ಯುದಾಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಶೀರ್ ಅವರು ಪತ್ನಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

24/03/2022 11:30 am

Cinque Terre

11.09 K

Cinque Terre

0

ಸಂಬಂಧಿತ ಸುದ್ದಿ