ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಯಿಯ ಆಸ್ತಿಯನ್ನು ಲಪಟಾಯಿಸಿ ಮಗ: ದೂರು ದಾಖಲು

ಕುಂದಾಪುರ: ಕೊರ್ಗಿ ಗ್ರಾಮದ ಹೊಸಮಠದ ರತಿ ಎ. ಶೆಡ್ತಿ (62) ಅವರಿಗೆ ಅವರ ಪತಿ ಆನಂದ ಶೆಟ್ಟಿ ನಿಧನದ ನಂತರ ದೊರೆತ ಆಸ್ತಿ ಹಾಗೂ 38.9 ಲಕ್ಷ ರೂ. ಹಣವನ್ನು ಪುತ್ರ ಮೋಸದಿಂದ ಪಡೆದಿದ್ದಾಗಿ ಪ್ರಕರಣ ದಾಖಲಾಗಿದೆ.

ಉಳ್ಳೂರು, ಕುಂಭಾಸಿ, ಹಂಗಳೂರು ಗ್ರಾಮಗಳಲ್ಲಿನ ಕೆಲವೊಂದು ಸ್ಥಿರಾಸ್ತಿಗಳು, ಎಲ್ ಐಸಿಯ 38 ಲಕ್ಷ ರೂ., ಅದರ ಬಡ್ಡಿ 90 ಸಾವಿರ ರೂ. ಗಳನ್ನು ಹುಬ್ಬಳ್ಳಿಯಲ್ಲಿರುವ ಪುತ್ರ ಗುರುರಾಜ ಶೆಟ್ಟಿ (38) ಮೋಸದಿಂದ ರತಿ ಅವರ ಫೋರ್ಜರಿ ಸಹಿ ಮಾಡಿ ಅವರ ಖಾತೆಯಿಂದ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದಾನೆ.

ಈ ಕುರಿತು ತಾಯಿ ವಿಚಾರಿಸಿದಾಗ ಜೀವಬೆದರಿಕೆ ಹಾಕಿದ್ದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

23/03/2022 02:47 pm

Cinque Terre

12.03 K

Cinque Terre

0

ಸಂಬಂಧಿತ ಸುದ್ದಿ