ಬಜಪೆ: ಕೈಕಂಬ ಸಮೀಪದ ಕಂದಾವರ ಪದವು ಶ್ರೀ ಕೊರ್ದಬ್ಬು ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ರಕ್ತದ ಕಲೆಗಳು ಕಂಡು ಬಂದಿದೆ. ಭಕ್ತರಲ್ಲಿ ಅನುಮಾನ ಉಂಟಾಗಿದ್ದು, ಅಲ್ಲದೆ ದೇವಸ್ಥಾನ ಅಪವಿತ್ರ ಮಾಡಿರುವ ಬಗ್ಗೆ ಭಕ್ತರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸ್ಥಳದಲ್ಲಿ ರಕ್ತದಲ್ಲಿ ಒದ್ದೆಯಾದ 200 ರೂ. ನೋಟು ಹಾಗೂ ಒಂದು ಬೆಂಕಿ ಪೆಟ್ಟಿಗೆ ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ದೇವಸ್ಥಾನದಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ದೇವಸ್ಥಾನಕ್ಕೆ ಹಿಂದೂ ಮುಖಂಡರು, ಕಾರ್ಯಕರ್ತರು ಭೇಟಿ ನೀಡಿದ್ದಾರೆ.
PublicNext
21/03/2022 06:59 pm