ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಕೊಲೆ

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿ ವ್ಯಕ್ತಿಯೊಬ್ಬರ ಶವ ಕಲ್ಲಿನಿಂದ ಜಜ್ಜಿ ಕೊಲೆಯಾದ ರೀತಿಯಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಕಾರ್ಕಳ ತಾಲೂಕು ಮುಂಡ್ಕೂರು ನಿವಾಸಿ ಹರೀಶ್ ಸಾಲ್ಯಾನ್ (47) ಎಂದು ಗುರುತಿಸಲಾಗಿದೆ. ಹರೀಶ್ ಸಾಲ್ಯಾನ್ ಕೊಲೆಯಾದ ಅಣತಿ ದೂರದಲ್ಲಿ ರಕ್ತಸಿಕ್ತ ಕಲ್ಲು ಸಿಕ್ಕಿದ್ದು, ಮೃತನ ಮೊಬೈಲ್ ಕೂಡ ಪತ್ತೆಯಾಗಿದೆ. ಹರೀಶ್ ಸಾಲ್ಯಾನ್ ಕೊಲೆಯಾದ ಸ್ಥಳದಲ್ಲಿ ಆತನ ಚೀಲ ದೊರೆತಿದ್ದು, ಶುಕ್ರವಾರ ರಾತ್ರಿ 8 ಗಂಟೆಗೆ ಬಪ್ಪನಾಡು ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ರಸೀದಿ ಮತ್ತು ಪ್ರಸಾದ ಪತ್ತೆಯಾಗಿದೆ.

ಕ್ಷುಲ್ಲಕ ಕಾರಣಕ್ಕಾಗಿ ಮದ್ಯ ಸೇವಿಸಿ ಹೊಡೆದಾಡಿಕೊಂಡು ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

20/03/2022 09:04 am

Cinque Terre

13.09 K

Cinque Terre

0

ಸಂಬಂಧಿತ ಸುದ್ದಿ