ಮಂಗಳೂರು : ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೋರ್ವ ನೇಣಿಗೆ ಶರಣಾದ ಘಟನೆ ಮಂಗಳೂರಿನ ಕುತ್ತಾರುವಿನ ಸಂತೋಷ್ ನಗರ ದಲ್ಲಿ ನಡೆದಿದೆ.
ಸಂತೋಷ್ ನಗರ ನಿವಾಸಿ ದೀಕ್ಷಿತ್ (19)ಆತ್ಮ ಹತ್ಯೆಗೆ ಶರಣಾದ ಯುವಕ. ದೀಕ್ಷಿತ್ ಸಂತೋಷ್ ನಗರದ ತನ್ನ ಬಾಡಿಗೆ ನಿವಾಸದಲ್ಲಿ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತ: ಕಂಕನಾಡಿ ಬೈಪಾಸ್ ನ ಕದ್ಕೋರಿ ಗುಡ್ಡೆಯ ದೀಕ್ಷಿತ್ ಕುಟುಂಬ ಕೆಲ ಸಮಯದಿಂದ ಸಂತೋಷ್ ನಗರದ ಬಾಡಿಗೆ ನಿವಾಸದಲ್ಲಿ ವಾಸವಿತ್ತು.
ದೀಕ್ಷಿತ್ ನಿನ್ನೆ ಸಂಜೆ ತಾಯಿಯೊಂದಿಗೆ ಕುತ್ತಾರುವಿನಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದ. ಆದರೆ ಅಲ್ಲಿಂದ ಮನೆಗೆ ಹೋಗಿ ಬರುತ್ತೇನೆಂದು ಓರ್ವನೇ ಸಂತೋಷ್ ನಗರದ ಬಾಡಿಗೆ ನಿವಾಸಕ್ಕೆ ಬಂದಿದ್ದಾನೆ.
ಬಳಿಕ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮವೈಫಲ್ಯವೇ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ. ಮೃತ ದೀಕ್ಷಿತ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಉದ್ಯೋಗಿಯಾಗಿದ್ದು, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
Kshetra Samachara
16/03/2022 01:33 pm