ಕುಂದಾಪುರ: ತಾಲೂಕಿನ ಕಾಳಾವರ ಸಮೀಪದ ಅಸೋಡಿನಲ್ಲಿ ಲಾರಿ ಚಾಲಕನಿಗೆ ನಡು ರಸ್ತೆಯಲ್ಲಿಯೇ ಕಾರು ಚಾಲಕನೊಬ್ಬ ಹಲ್ಲೆಗೈದು, ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ.
ನ್ಯಾಯ ಬೆಲೆ ಅಂಗಡಿಗಳಿಗೆ ಅಕ್ಕಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ ಅಕ್ಕಿ ಸಾಗಾಟದ ಲಾರಿ ಚಾಲಕ ಮಹಮ್ಮದ್ ಇಸಾಕ್ ಗೆ, ಕೋಟೇಶ್ವರ ಹಾಲಾಡಿ ರಸ್ತೆಯ ಅಸೋಡು ನಂದಿಕೇಶ್ವರ ದೇಗುಲದ ಕಮಾನು ಬಳಿ ಹಿಂದಿನಿಂದ ಬಂದ ರಿಟ್ಸ್ ಕಾರಿನ ಚಾಲಕ ಕ್ಷುಲ್ಲಕ ಕಾರಣಕ್ಕೆ ಕಾರನ್ನು ಮುಂದಕ್ಕೆ ತಂದು ನಿಲ್ಲಿಸಿ ಹಲ್ಲೆಗೈದಿದ್ದಾನೆ.
ಕಾರು ಚಾಲಕ ಕಾರಿನಿಂದ ಇಳಿದು ಹೋಗಿ ಲಾರಿ ಚಾಲಕನಿಗೆ ಹೊಡೆಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾರು ಚಾಲಕನ ವಿರುದ್ಧ ಇಸಾಕ್ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Kshetra Samachara
10/03/2022 12:10 pm