ಮುಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಜಾತ್ರಾ ಮಹೋತ್ಸವದಲ್ಲಿ ಹೊಂಚುಹಾಕಿ ಮಹಿಳೆಯರ ಸರ ಕಳ್ಳತನ ಮಾಡುತ್ತಿದ್ದ ಉತ್ತರ ಭಾರತ ಮೂಲದ ಓರ್ವನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಉಳಿದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಪಾವಂಜೆ ಬಾಕಿಮಾರು ಗದ್ದೆಯಲ್ಲಿ ಜಾತ್ರಾಮಹೋತ್ಸವದಲ್ಲಿ ಮಹಿಳೆಯರು ಕಳ್ಳರಿಂದ ಜೋರಾಗಿ ಬೊಬ್ಬೆ ಹಾಕುತಿದ್ದಂತೆ ಕಾರ್ಯಪ್ರವೃತ್ತರಾದ ಸ್ಥಳೀಯ ಯುವಕ ತೇಜ್ಪಾಲ್ ಮತ್ತಿತರರು ಕಳ್ಳರ ಬೆನ್ನಟ್ಟಿ ಓರ್ವನನ್ನು ಹಿಡಿದು ಸರ ವಶಪಡಿಸಿಕೊಂಡು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದು ಉಳಿದ ಮೂವರು ಪರಾರಿಯಾಗಿದ್ದಾರೆ.
ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಬೈಂದೂರು ಮೂಲದ ಇನ್ನೋರ್ವ ಮಹಿಳೆಯ ಸರ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಕಳ್ಳರ ಮುಖ ಚಹರೆ ಪತ್ತೆಯಾಗಿದ್ದು ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳ್ಳತನ ಪತ್ತೆಹಚ್ಚಿದ ಯುವಕರ ತಂಡಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
Kshetra Samachara
08/03/2022 10:45 pm