ಮುಲ್ಕಿ:ಸಮೀಪದ ಹಳೆಯಂಗಡಿ, ಇಂದಿರಾನಗರ, ತೋಕೂರು ಪರಿಸರದಲ್ಲಿ ಸಂಜೆಯಾದರೆ ಸಾಕು ವಾಮಾಚಾರಿಗಳು ಸಕ್ರಿಯವಾಗುತ್ತಿದ್ದು ಹಾವಳಿಯಿಂದ ಸ್ಥಳೀಯರಲ್ಲಿ ಆತಂಕ ನಿರ್ಮಾಣವಾಗಿದೆ. ಈ ಬಗ್ಗೆ ಪೊಲೀಸರಿಗೆ ಮೌಖಿಕ ದೂರು ನೀಡಲಾಗಿದ್ದು ರಾತ್ರಿ ವೇಳೆ ಗಸ್ತು ಬಿಗಿಗೊಳಿಸುವಂತೆ ಆಗ್ರಹ ವ್ಯಕ್ತವಾಗಿದೆ.
ತೋಕೂರು ಬಸ್ ನಿಲ್ದಾಣ ಪರಿಸರ, ಕೆರೆಕಾಡು ಬೆಳ್ಳಾಯರು ಮುಖ್ಯರಸ್ತೆಯಲ್ಲಿ ರಾತ್ರಿ ವೇಳೆ ಕೋಳಿ ಬಲಿ ನೀಡುವುದು, ಲಿಂಬೆಹುಳಿ, ಕುಂಬಳಕಾಯಿ ಕಡಿಯುವುದು ಇತ್ಯಾದಿ ವಾಮಾಚಾರ ಪ್ರಯೋಗ ನಡೆಸುತ್ತಿದ್ದು ಸ್ಥಳೀಯರು ಬೆಳಗ್ಗೆ ನಡೆದಾಡಲು ಭಯಪಡುವ ಸ್ಥಿತಿ ಎದುರಾಗಿದೆ. ವಾಮಾಚಾರದಲ್ಲಿ ಹೊರಗಿನ ವ್ಯಕ್ತಿಗಳಲ್ಲದೆ ಸ್ಥಳೀಯರ ಪಾತ್ರವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
Kshetra Samachara
28/02/2022 10:10 am