ಬೈಂದೂರು: ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುತ್ತೇವೆ ಎಂದು ಹೇಳಿ ಹೋದ ತಾಯಿ ಮಗಳು ನಾಪತ್ತೆಯಾದ ಘಟನೆ ಉಪ್ಪುಂದದಲ್ಲಿ ನಡೆದಿದೆ.
ಉಪ್ಪುಂದ ಗ್ರಾಮದ ಸುನಂದ(45) ತಮ್ಕ ಮಗಳು ಅಶ್ಮಿತಾ (8) ಜೊತೆ ನಾಪತ್ತೆಯಾಗಿದ್ದಾರೆ. ಇವರು ಫೆ.14 ರಂದು ಮಧ್ಯಾಹ್ನ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಮನೆಗೆ ವಾಪಾಸು ಬಾರದೇ ಇದ್ದು, ಸಂಬಂಧಿಕರು ಹಾಗೂ ನೆರೆಕೆರೆಯವರಲ್ಲಿ ವಿಚಾರಿಸಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಈ ಸಂಬಂಧ ಸುನಂದ ಅವರ ಸಹೋದರ ಕೇಶವ ಖಾರ್ವಿ ಎಂಬವರು ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Kshetra Samachara
19/02/2022 03:36 pm